ದ.ಕ.ಸಹಿತ ರಾಜ್ಯದ 8 ಜಿಲ್ಲೆಗಳಲ್ಲಿ ಮಿಷನ್ ಯುವ ಸಮೃದ್ದಿ | ಕೌಶಲ ಮತ್ತು ಉದ್ಯಮಶೀಲತಾ ವಲಯದಲ್ಲಿ 10 ದಶ ಲಕ್ಷ ಆರ್ಥಿಕ ಅವಕಾಶಗಳ ಸೃಷ್ಟಿ

ರಾಜ್ಯದಲ್ಲಿ 2025 ರ ವೇಳೆಗೆ ಕೌಶಲ ಮತ್ತು ಉದ್ಯಮಶೀಲತಾ ವಲಯದಲ್ಲಿ 10 ದಶ ಲಕ್ಷ ಆರ್ಥಿಕ ಅವಕಾಶ‌ಗಳನ್ನು ಸೃಷ್ಟಿಸುವ ಗುರಿಯೊಂದಿಗೆ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ ಎಂದು ಡಿಸಿಎಂ ಡಾ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.

ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಆದ್ಯತೆಗನುಸಾರವಾಗಿ ಜಾರಿಗೊಳಿಸುವ ಉದ್ದೇಶದಿಂದ ಜುಲೈ 15 ರ ಮೊದಲು ಕಾರ್ಯ ಯೋಜನೆಯ ವರದಿ ಸಲ್ಲಿಸುವಂತೆ ಕಾರ್ಯಪಡೆ‌ಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕೊರೋನಾ ಸಂಕಷ್ಟದ ಕಾರಣದಿಂದ ಆರ್ಥಿಕ ಅವಕಾಶ‌ಗಳು, ಉದ್ಯೋಗ ಸರಪಳಿಯ ಮೇಲೆ ಮಾರಕ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಈ ವಲಯವನ್ನು ಚೇತರಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ‘ಮಿಷನ್ ಯುವ ಸಮೃದ್ಧಿ’ ಹೆಸರಿನಡಿ ಯೋಜನೆ ರೂಪಿಸಲಾಗಿದೆ.

ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ ದಕ್ಷಿಣ ಕನ್ನಡ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಯಚೂರು, ಕೊಪ್ಪಳ, ಧಾರವಾಡ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

Leave A Reply

Your email address will not be published.