ಸಾವಿನಲ್ಲಿಯೂ ಒಂದಾದ ಹಿರಿಜೀವಗಳ ಜೋಡಿ…ಪತ್ನಿ ಮೃತಪಟ್ಟ 18 ಗಂಟೆಯೊಳಗೆ ಪತಿಯ ಸಾವು..ಬೆಳ್ತಂಗಡಿಯ ನೆರಿಯದಲ್ಲಿ ನಡೆದ ಘಟನೆ
ಸಾವಿನಲ್ಲೂ ಒಂದಾಗುವ ಭಾಗ್ಯ ಎಲ್ಲಾ ದಂಪತಿಗಳಿಗೆ ಸಿಗುವುದು ಅಪರೂಪ. ಆದರೆ ಇಲ್ಲೊಂದು ದಂಪತಿಗಳಿಗೆ ಆ ಭಾಗ್ಯ ಸಿಕ್ಕಿತೆಂದರೆ ತಪ್ಪಾಗದು.ಕೊರೋನ ಮಹಾಮಾರಿಯ ಎರಡನೇ ಅಲೆಯ ಸೋಂಕಿಗೆ ತುತ್ತಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ ಹದಿನೆಂಟೇ ಗಂಟೆಗಳಲ್ಲಿ ಆಕೆಯ ಪತಿಯೂ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಎಂಬಲ್ಲಿ ವರದಿಯಾಗಿದೆ.
ಬೆಳ್ತಂಗಡಿಯ ನೆರಿಯ ಗ್ರಾಮದ ನಿವಾಸಿ 58 ವರ್ಷ ವಯಸ್ಸಿನ ಸಾರಮ್ಮ ಎಂಬ ಮಹಿಳೆಯೊಬ್ಬರು 22 ನೇ ಮಂಗಳವಾರದಂದು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಮರಣ ಹೊಂದಿದ್ದು, 68 ರ ಹರೆಯದ ಪತಿ ಇಬ್ರಾಹಿಂ ರವರು ಮರುದಿನ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ.
ಪುತ್ರ ಅಬ್ದುಲ್ ಖಾದರ್ ರವರಿಗೂ ಕೋವಿಡ್ ಧೃಡಪಟ್ಟಿದ್ದು, ಮೃತ ದಂಪತಿಗಳ ಅಂತ್ಯಸಂಸ್ಕಾರ ನೆರಿಯ ಜುಮ್ಮಾ ಮಸ್ಟೀದ್ ದಫನ ಭೂಮಿಯಲ್ಲಿ ಕೋವಿಡ್ ನಿಯಮಾನುಸಾರ ನಡೆದಿದೆ. ಇತ್ತ ಸಾವಿನಲ್ಲೂ ದಂಪತಿಗಳು ಜೊತೆಯಾದರು ಎಂದುಕೊಂಡರೆ, ಅತ್ತ ಎರಡೂ ಹಿರಿ ಜೀವಗಳು ಒಂದೇ ಬಾರಿಗೆ ಅಗಲಿರುವುದು ಕುಟುಂಬವನ್ನು ಇನ್ನಷ್ಟು ದುಃಖಕ್ಕೆ ದೂಡಿರುವುದು ವಿಪರ್ಯಾಸ.