ಪುತ್ತೂರು | ರಬ್ಬರ್ ಗಿಡಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ 20 ರ ಯುವಕ ಪತ್ತೆ

ಈಶ್ವರಮಂಗಲ : ರಬ್ಬರ್ ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಈಶ್ವರಮಂಗಲದ ನೇರೊಲ್ಲಡ್ಕದಲ್ಲಿ ನಡೆದಿದೆ.

ಶರತ್(20) ನೇಣು ಬಿಗಿದುಕೊಂಡ ದುರ್ದೈವಿ.

ಇಂದು ಮಧ್ಯಾಹ್ನ ಇದ್ದಕ್ಕಿದ್ದಂತೆ ಯಾರಿಗೂ ಹೇಳದೆ ಮನೆಯಿಂದ ಶರತ್ ಕಾಣೆಯಾಗಿದ್ದ. ಶರತ್ ನನ್ನು ಹುಡುಕಾಡಿದಾಗ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ರಬ್ಬರ್ ತೋಟವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಘಟನಾ ಸ್ಥಳಕ್ಕೆ ಈಶ್ವರಮಂಗಲ ಹೊರಾ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆ ಇದಾಗಿದೆ ಎಂದು ಶಂಕಿಸಲಾಗಿದ್ದು ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

Leave A Reply

Your email address will not be published.