ಅನ್ಯಜಾತಿಯ ಹುಡುಗನನ್ನು ಪ್ರೀತಿಸಿದ ಮಗಳನ್ನೇ ಹತ್ಯೆ ಮಾಡಿದ ಅಪ್ಪ

ಅನ್ಯ ಜಾತಿಯ ಹುಡುಗನನ್ನ ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ತಂದೆಯೋರ್ವ ತನ್ನ ಮಗಳನ್ನೇ ಹತ್ಯೆ ಮಾಡಿರುವ ಘಟನೆ ಜೂನ್ 18ರಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.

 

ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಮಹದೇಶ್ವರ ದೇವಸ್ಥಾನದ ಬೀದಿಯಲ್ಲಿಯೇ ತಂದೆ ಇಂತಹ ಘನಘೋರ ಕೃತ್ಯ ನಡೆಸಿದ್ದಾನೆ.

ತಂದೆಯಿಂದ ಹತ್ಯೆಯಾದ ಯುವತಿಯನ್ನು ಗಾಯತ್ರಿ (18) ಎಂದು ಗುರುತಿಸಲಾಗಿದೆ.

ಜಯಣ್ಣ ಕೊಲೆಗೈದ ಆರೋಪಿ ತಂದೆ.

ಈತ ಮಗಳನ್ನು ಹತ್ಯೆಗೈದು ಪೊಲೀಸರಿಗೆ ಶರಣಾಗಿದ್ದಾನೆ.

ಸ್ಥಳಕ್ಕೆ ಹುಣಸೂರು ಡಿವೈಎಸ್ಪಿ ರವಿಪ್ರಸಾದ್ ಭೇಟಿ, ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.