ಸವಣೂರು : ಸೀಲ್‌ಡೌನ್ ಆಗಿದ್ದರೂ ಸಂಚಾರಿ ಬೀಡಿ ಬ್ರಾಂಚ್ ಓಪನ್ | ದಂಡ

ಸವಣೂರು: ಜಿಲ್ಲಾಧಿಕಾರಿಯವರ ಆದೇಶದಂತೆ ಸೀಲ್‌ಡೌನ್ ಆಗಿರುವ ಸವಣೂರು ಗ್ರಾ.ಪಂ.ವ್ಯಾಪ್ತಿಯ ಕಾಯರ್ಗದಲ್ಲಿ ನಿಯಮ ಉಲ್ಲಂಘಿಸಿ ಬೀಡಿ ಬ್ರಾಂಚ್ ವ್ಯವಹಾರ ಮಾಡುತ್ತಿರುವುದನ್ನು ಪತ್ತೆ ಮಾಡಿ ದಂಡ ವಿಧಿಸಲಾಗಿದೆ.

 

ಸವಣೂರು ಗ್ರಾಮದ ಕಾಯರ್ಗ ಸಮೀಪ ಪಿಕಪ್ ವಾಹನದಲ್ಲಿ ಬೀಡಿ ಬ್ರಾಂಚ್ ನಡೆಸುತ್ತಿರುವ ಮಾಹಿತಿ ಪಡೆದ ಸವಣೂರು ಗ್ರಾ.ಪಂ.ನ ಕೋವಿಡ್ ಕಾರ್ಯಪಡೆ ದಾಳಿ ನಡೆಸಿ ದಂಡ ವಿಧಿಸಿದೆ.

ಸೀಲ್‌ಡೌನ್ ಪ್ರದೇಶದಲ್ಲಿ ಮೆಡಿಕಲ್ ಎಮರ್ಜೆನ್ಸಿ ಹೊರತು ಪಡೆಸಿ ಎಲ್ಲಾ ವ್ಯವಹಾರಗಳಿಗೆ ನಿರ್ಬಂಧ ಇದ್ದರೂ ಕೆಲವೆಡೆ ಉಲ್ಲಂಘನೆಯಾಗುತ್ತಿರುವುದನ್ನು ಪತ್ತೆ ಮಾಡಿ ದಂಡ ವಿಧಿಸಲಾಗುತ್ತದೆ.

Leave A Reply

Your email address will not be published.