ಮನೆಯಲ್ಲಿ ಸತ್ತು ಮಲಗಿದ್ದ ತನ್ನ ಕಂದನ ಹೆಣ ಇಟ್ಟುಕೊಂಡು ಬೇರೆ ರೋಗಿಯನ್ನು ಆಸ್ಪತ್ರೆಗೆ ಸೇರಿಸಲು ಧಾವಿಸಿದ ಆಂಬ್ಯುಲೆನ್ಸ್ ಚಾಲಕ

ಮೈಸೂರು: ಮನೆಯಲ್ಲಿ ಮಗ ಮೃತಪಟ್ಟಿದ್ದಾನೆ. ಸತ್ತು ಮಲಗಿದ ಪ್ರೀತಿಯ ಮಗನ ಶವವನ್ನು ಮನೆಯಲ್ಲಿಯೇ ಬಿಟ್ಟು ಈ ಅಂಬುಲೆನ್ಸ್ ಚಾಲಕ ಒಬ್ಬರು ಕರ್ತವ್ಯ ಕರೆಗೆ ಓಗೊಟ್ಟು ಹೋದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮನುಷ್ಯತ್ವವನ್ನು ಪ್ರಶ್ನಿಸುತ್ತಿರುವ ಕೋವಿಡ್ ಕಾಲದ ಹಲವು ದುರಾಸೆಗಳ ಮತ್ತು ಕೆಟ್ಟ ಘಟನೆಗಳ ನಡುವೆ ಈತನ ಕರ್ತವ್ಯ ಪ್ರಜ್ಞೆಗೆ ಇಡೀ ಮೈಸೂರು ಇದೀಗ ಸಾಕ್ಷಿಯಾಗಿದೆ.

ಸಹಾಯವಾಣಿ ಕೇಂದ್ರದ ಆಯಂಬುಲೆನ್ಸ್ ಡ್ರೈವರ್ ಆಗಿರುವ ಮುಬಾರಕ್ ಅವರಿಗೆ ಎಲ್ಲೆಡೆಯಿಂದ ಜನರು ಕೊಂಡಾಡುತ್ತಿದ್ದಾರೆ. ಮೈಮೇಲೆ ಬಿಸಿನೀರು ಬಿದ್ದ ಕಾರಣ ಇವರ ಮಗುವು ಮೃತಪಟ್ಟಿತ್ತು. ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಮಗುವಿನ ಸಾವಿನಿಂದ ಕಂಗೆಟ್ಟು ಹೋಗಿದ್ದ ನಡುವೆಯೇ ಸಹಾಯವಾಣಿಯಿಂದ ರೋಗಿಯೊಬ್ಬರಿಗೆ ಆಸ್ಪತ್ರೆಗೆ ಸಾಗಿಸುವಂತೆ ಕರೆ ಬಂದಿದೆ.

ಮೈಸೂರಿನ ಸಿಗ್ಮಾ ಆಸ್ಪತ್ರೆಯಿಂದ ಚಾಮರಾಜನಗರಕ್ಕೆ
ರೋಗಿಯನ್ನು ಸಾಗಿಸಬೇಕಿತ್ತು. ಆದರೆ ತಡ ಮಾಡದ
ಮುಬಾರಕ್ ಅವರು ಶವವನ್ನು ಮನೆಯಲ್ಲಿಯೇ ಬಿಟ್ಟು ಅದೇ
ದುಃಖದೊಂದಿಗೆ ರೋಗಿಯನ್ನು ಕರೆದುಕೊಂಡು ಆಸ್ಪತ್ರೆಗೆ
ಸಾಗಿಸಿದ್ದಾರೆ. ಇವರ ಕರ್ತವ್ಯ ಪ್ರಜ್ಞೆಗೆ ಆಸ್ಪತ್ರೆಯ ಸಿಬ್ಬಂದಿ
ಮೂಕ ವಿಸ್ಮಿತರಾಗಿದ್ದಾರೆ.

ಮೈಸೂರಿನ ಸಿದ್ದಿಕ್ ನಗರದ ನಿವಾಸಿಯಾಗಿರುವ ಮುಬಾರಕ್ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

Leave A Reply

Your email address will not be published.