ಸುಳ್ಯ : 100 ನಾಟೌಟ್ ರಸ್ತೆಯಲ್ಲಿ ಬ್ಯಾಟ್ ಬೀಸಿದ ಕಾಂಗ್ರೆಸ್ ನಾಯಕರು | ತೈಲ ಬೆಲೆ ಏರಿಕೆ ವಿರುದ್ದ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ
ಸುಳ್ಯ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ 100 ನಾಟೌಟ್ ನಡೆಯಿತು.
ಸುಳ್ಯದ ಖಾಸಗಿ ಬಸ್ ನಿಲ್ದಾಣದ ಎದುರು ರಸ್ತೆಯ ಬದಿಯಲ್ಲಿ ಪ್ರತಿಭಟನೆ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಮಾತನಾಡಿ, ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗಿ ಜನರು ಸಂಕಷ್ಟದಲ್ಲಿದ್ದು,ಆದರೆ ಕೇಂದ್ರದ ಎನ್‌ಡಿಎ ನೇತೃತ್ವದ ಸರಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ದಿನದಿಂದ ದಿನಕ್ಕೆ ಏರಿಸಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ. ಈ ಪರಿಸ್ಥಿತಿಯನ್ನು ನೋಡುವಾಗ ಕೊರೋನಾದಿಂದ ಬೆಲೆ ಏರಿಕೆಯೇ ಭೀಕರ ಎಂದು ಗೋಚರಿಸುತ್ತದೆ ಎಂದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಭರತ್ ಮುಂಡೋಡಿ ಮಾತನಾಡಿ, ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯಾನಂತರ ಪೆಟ್ರೋಲ್ ಬೆಲೆ ಇದೇ ಮೊದಲ ಬಾರಿಗೆ ನೂರರ ಗಡಿದಾಟಿದೆ.
ಪೆಟ್ರೋಲ್‌ಗೆ ಬೆಲೆ ಹೆಚ್ಚಾಯಿತೆಂದು ಡೀಸೆಲ್ ವಾಹನ ಬಂತು. ಆದರೆ ಇಂದು ಡೀಸೆಲ್ ಬೆಲೆಯನ್ನು ಕೂಡಾ ಪೆಟ್ರೋಲ್ ಬೆಲೆಗೆ ಸಮಾನಾಗಿ ಏರಿಸಿ ಗೂಡ್ಸ್ ವಾಹನಗಳಲ್ಲಿ ಸರಕು ಸಾಮಾನು ಸಾಗಾಟವು ಕಷ್ಟವಾಗುತ್ತಿದೆ. ಬೆಲೆ ಏರಿಕೆಯಿಂದಾಗಿ ಜನರ ಜೀವನೋಪಾಯ ಕಷ್ಟವಾಗಿದೆ ಎಂದರು.
ಡಿಸಿಸಿ ಉಪಾಧ್ಯಕ್ಷ ಎನ್. ಜಯಪ್ರಕಾಶ್ ರೈ
ಡಿಸಿಸಿ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ನ.ಪಂ.ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ. ಶಹೀದ್, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂಜೆ, ಕಾಂಗ್ರೆಸ್ ಪ್ರಮುಖರಾದ ಸುಧೀರ್ ರೈ ಮೇನಾಲ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಶಾಫಿ ಕುತ್ತಮೊಟ್ಟೆ, ರಂಜಿತ್ ರೈ ಮೇನಾಲ, ಶಹೀದ್ ಪಾರೆ, ಧರ್ಮಪಾಲ ಕೊಯಿಂಗಾಜೆ, ಮೂಸ ಕುಂಞಿ ಪೈಂಬೆಚ್ಚಾಲು, ಕೆ.ಗೋಕುಲ್ ದಾಸ್, ನಂದರಾಜ ಸಂಕೇಶ, ಕೀರ್ತನ್ ಕೊಡಪಾಲ, ಶರೀಫ್ ಕಂಠಿ, ಸುರೇಶ್ ಎಂ.ಎಚ್., ಅನಿಲ್ ರೈ ಬೆಳ್ಳಾರೆ ಮೊದಲಾದವರಿದ್ದರು.
ಪ್ರತಿಭಟನೆಯಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ನಾಯಕರು ಭಾಷಣ ಮುಗಿದ ಬಳಿಕ ರಸ್ತೆಯಲ್ಲಿ ವಿಕೆಟ್ ಇಟ್ಟು ಬ್ಯಾಟ್ ಬೀಸಿದರು.