ನೇಣು ಹಾಕಿಕೊಳ್ಳುವಾಗ ಬಿದ್ದು ಸಾವು ! | ‘ ನೇಣು ಹಾಕಿಕೊಳ್ಳುವಾಗ ಎಚ್ಚರ !!

ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಉಪ್ಪಳದಲ್ಲಿ
ಆತ್ಮಹತ್ಯೆಗೆ ಯತ್ನಿಸುತ್ತಿರುವಾಗ ನೇಣು ಹಾಕಿಕೊಳ್ಳಲು ಬಳಸಿದ್ದ ವಯ‌ರ್ ತುಂಡಾಗಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಉಪ್ಪಳ ನಿವಾಸಿ ಮಂಜುನಾಥ್ ನಾಯ್ಕ (45) ಮೃತ ದುರ್ದೈವಿ.

ವಿಪರೀತ ಕುಡಿತದ ಚಟ ಹೊಂದಿದ್ದ ಮಂಜುನಾಥ್, ಮನೆಯ ಹಾಲ್‌ನಲ್ಲಿ ಕೇಬಲ್ ವಯರ್ ಕಟ್ಟಿಕೊಂಡು ನೇಣು ಹಾಕಿಕೊಳ್ಳಲು ಯತ್ನಿಸುವಾಗ ವಯರ್ ತುಂಡಾಗಿದೆ. ಹಾಗಾಗಿ ನೇಣು ಹಾಕಿಕೊಳ್ಳುವ ಮೊದಲೇ ಬಿದ್ದು, ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.

ನೇಣು ಹಾಕಿಕೊಳ್ಳುವಾಗ ಜಾಗ್ರತೆ ಮಾಡಿಕೊಳ್ಳಬೇಕು. ಇಲ್ಲದಿದ್ರೆ ಬಿದ್ದು ಸಾಯಬಹುದು ಎಂಬ ಮೀಮ್ಸ್ ಇದೀಗ ಹರಿದಾಡುತ್ತಿದೆ.

ಇಲ್ಲಿ ಯಾವುದು ತಪ್ಪು? ನೇಣು ಹಾಕಿಕೊಳ್ಳಲು ನಿರ್ಧರಿಸಿದ್ದು ತಪ್ಪಾ ? ಅಥವಾ ಆತನಗ್ಯಾರಂಟಿ ಸಾವು ತರಿಸುವ ಬೇರೆ ಆಯ್ಕೆ ಮಾಡಿಕೊಳ್ಳಬೇಕಿತ್ತಾ ? ವಯರ್ ಕ್ವಾಲಿಟಿ ಕಮ್ಮಿ ಇತ್ತಾ ? ಕ್ವಾಲಿಟಿ ಸರಿ ಇದ್ದು, ಸರಿಯಾದ ಗೇಜ್ ನ ವಯರ್ ಆಯ್ಕೆ ಮಾಡುವಲ್ಲಿ ಆತ್ಮಹತ್ಯಾಗಾರ ಸೋತನಾ ?
ಅಥವಾ ಆತ್ಮಹತ್ಯಾಗಾರ ಕೊನೆಗೂ ಗೆದ್ದಿದ್ದಾನ ?! ದಾರಿ ಯಾವುದಾದರೇನು, ಗುರಿ ತಾನೇ ಮುಖ್ಯ ? ಆತ್ಮಹತ್ಯೆಯೇ ಉದ್ದೇಶ ಇರುವಾಗ , ಹೇಗೂ ಆತ ಸತ್ತೋದ ನಲ್ಲ. ಟಾಸ್ಕ್ ಆಕಂಪ್ಲಿಷ್ಡ್. ಟಾಸ್ಕ್ ಕಂಪ್ಲೀಟೆಡ್ !!! ಆತ್ಮಹತ್ಯಾಗಾರ ಉದ್ದೇಶ ಸಾಧಿಸುವಲ್ಲಿ ಗೆದ್ದಿದ್ದಾರೆ. ಮುಂತಾದ ಪ್ರಶ್ನೋತ್ತರಗಳು ಮನಸ್ಸಿನಲ್ಲಿ ಮೂಡುತ್ತವೆ.

ಒಟ್ಟಾರೆಯಾಗಿ ಬದುಕನ್ನು ಪ್ರೀತಿಸುವ ನಿರ್ಧಾರ ತೆಗೆದುಕೊಳ್ಳುವಲ್ಲಿ ಆತ ದಾರುಣವಾಗಿ ಸೋತಿದ್ದಾರೆ ಎನ್ನಬಹುದು !!

Leave A Reply

Your email address will not be published.