ಶೌರ್ಯ ಸ್ವಯಂಸೇವಕರಿಂದ ಅಪಾಯದ ಸ್ಥಿತಿಯಲ್ಲಿದ್ದ ಮರಗಳ ತೆರವು
ಧರ್ಮಸ್ಥಳ ಗ್ರಾಮದ ಮುಳಿಕ್ಕಾರ್ ವಾರ್ಡಿನ ಕೋಟಿ ಪೂಜಾರಿ ಇವರ ಮನೆಯ ಮೇಲ್ಭಾಗದ ತೆಂಗಿನ ಮರ ಮತ್ತು ಆಕೇಶಿಯಾ ಮರ ಸಿಡಿಲು ಬಡಿದು ಅಪಾಯದ ಸ್ಥಿತಿಯಲ್ಲಿತ್ತು. ಗ್ರಾಮ ಪಂಚಾಯತ್ ಸದಸ್ಯರೊಂದಿಗೆ ಈ ವಿಚಾರವನ್ನು ಭಿನ್ನವಿಸಿಕೊಂಡಿದ್ದರಿಂದಾಗಿ ಪಂಚಾಯತ್ ಸದಸ್ಯರು ಧರ್ಮಸ್ಥಳ ‘ಶೌರ್ಯ’ ವಿಪತ್ತು ನಿರ್ವಹಣಾ ಘಟಕದವರೊಂದಿಗೆ ಈ ಬಗ್ಗೆ ಚರ್ಚಿಸಿದ್ದರು. ಕಾರ್ಯಾಚರಣೆಗೆ ಒಪ್ಪಿಕೊಂಡ ಶೌರ್ಯ ವಿಪತ್ತು ನಿರ್ವಹಣಾ ಘಟಕ ಧರ್ಮಸ್ಥಳದ ಸದಸ್ಯರು ಅಪಾಯದ ಸ್ಥಿತಿಯಲ್ಲಿದ್ದ ಮರಗಳನ್ನು ಯಾವುದೇ ಹಾನಿಯುಂಟು ಮಾಡದೆ ತೆರವುಗೊಳಿಸುವಲ್ಲಿ ಯಶಸ್ವಿಯಾದರು.
ಧರ್ಮಸ್ಥಳ ಗ್ರಾಮಪಂಚಾಯತ್ ಸದಸ್ಯರಾದ ಹರ್ಷಿತ್ ಜೈನ್, ಮುರಳೀಧರ್ ದಾಸ್, ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಸಂಯೋಜಕ ಸ್ವಸ್ತಿಕ್ ಕನ್ಯಾಡಿ, ಸ್ವಯಂಸೇವಕರಾದ ರವೀಂದ್ರ, ಕೊರಗಪ್ಪ, ಗಿರೀಶ್ ನಿಡ್ಲೆ, ಸ್ನೇಕ್ ಪ್ರಕಾಶ್, ವಿಘ್ನೇಶ್ ಧರ್ಮಸ್ಥಳ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದರು.