ನಮ್ಮ ಅಧ್ಯಕ್ಷರ ಪಟೇಲ್ತಿ ಹಾಫ್ ಅನ್ ಲಾಕ್ | ‘ ಕೆಲವನ್ನು ತೋರಿಸಿ, ಕೆಲವನ್ನು ಮುಚ್ಚಿಡಿ ‘ ಎಂದು ಅಡಿಬರಹ ಹಾಕಿ ಹಾಟ್ ಫೋಟೋ ತೋರಿಸಿದ ಬೆಡಗಿ

ನಟಿ ಹೆಬಾ ಪಟೇಲ್ ಲಾಕ್ ಡೌನ್ ಸಂದರ್ಭದಲ್ಲಿ ತನ್ನ ಮೈಮೇಲಿನ ಬಟ್ಟೆಬರೆಗಳನ್ನು ಹಾಫ್ ಅನ್ಲಾಕ್ ಮಾಡಿಕೊಂಡು ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಳೆ. ಮತ್ತೆ ಬಿದ್ದಿದೆ ನಮ್ಮ ಪಡ್ಡೆ ಹುಡುಗರ ನಿದ್ದೆಗೆ ಸಂಚಕಾರ.

ಈಕೆ ಸನ್ನಿ ಲಿಯೋನ್ ಥರ ಅಲ್ಲ. ಇವಳು ಒಳ್ಳೆಯ ಹುಡುಗಿ. ಎಷ್ಟು ಬೇಕೋ ಅಷ್ಟನ್ನೇ ಬಿಚ್ಚಿಟ್ಟು, ಮುಚ್ಚಿಡ ಬೇಕಾದ್ದನ್ನು ಬಚ್ಚಿಡುವ ಕಲೆ ಆಕೆಗೆ ಗೊತ್ತು. ಅದಕ್ಕೇ ಇರಬೇಕು ಆಕೆ
‘ ಕೆಲವನ್ನು ತೋರಿಸಿ, ಕೆಲವನ್ನು ಮುಚ್ಚಿಡಿ ‘ ಎಂಬ ಅಡಿಬರಹ ನೀಡಿ ಇವತ್ತು ಈ ಫೋಟೋಗಳನ್ನು ಹಂಚಿಕೊಂಡಿದ್ದಾಳೆ.
ಇನ್ಸ್ಟಾಗ್ರಾಮ್ ನಲ್ಲಿ ಈ ಫೋಟೋ ಹಂಚಿಕೊಳ್ಳುವ ಮೂಲಕ ಓಪನ್ ಕಾಮೆಂಟ್ ಮಾಡಿದ್ದಾರೆ.

ಹೆಬಾ ಪಟೇಲ್ ಅಂದರೆ ನಿಮಗೆ ಯಾರೆಂದು ಪಕ್ಕನೆ ನೆನಪಾಗಲಿಕ್ಕಿಲ್ಲ. ‘ ಅದೇ ನಮ್ಮ ಅಧ್ಯಕ್ಷರ ಡವ್ ಮಾರ್ರೆ ಆಕೆ. ನಮ್ಮ ಪಟೇಲ್ತಿ ಗೊತ್ತಾಗಲಿಲ್ಲವೇ…ಎಂಥ ನೀವು…?!  
ನಾನೊಂದು ಚಿತ್ರದ ಸಾಂಗು ಹೇಳುತ್ತೇನೆ. ಆಗ ನಿಮಗೆ ಗೊತ್ತಾಗದೆ ಇರಲಿಕ್ಕೆ ಉಂಟಾ…?’
” ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ…..”

ಯೆಸ್, ಆಕೆ ನಮ್ಮ ‘ ಅಧ್ಯಕ್ಷ ‘ ಶರಣ್ ಜತೆ ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ಬೆಡಗಿ. 2014 ರಲ್ಲಿ ಬಿಡುಗಡೆಯಾಗಿದ್ದ ಅಧ್ಯಕ್ಷ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿತ್ತು. ತದನಂತರ ಕನ್ನಡ ಚಿತ್ರಗಳಲ್ಲಿ ಆಕೆಗೆ ಅವಕಾಶ ಸಿ ಗಳಿಲ್ಲವೋ, ಅಥವಾ ಆಕೆಯೇ ನಟಿಸಲು ಒಪ್ಪಿಲ್ಲವೋ ಗೊತ್ತಿಲ್ಲ. ಒಟ್ಟಾರೆ ನಂತರ ಆಕೆ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲಿಲ್ಲ.

ಮೂಲತ: ಮುಂಬೈನ ಹೆಬಾ ಪಟೇಲ್, ಸದ್ಯ ತೆಲುಗಿನಲ್ಲಿ ಮುಂಚೂಣಿಯಲ್ಲಿದ್ದು, ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಕೆ ಕುಮಾರಿ 21F, ಡೆಕ್ಕನ್ ಕ್ರಾನಿಕಲ್, 24 ಕಿಸ್ಸಸ್, ಭೀಷ್ಮ ಮುಂತಾದ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿರುತ್ತಾಳೆ ಹೆಬಾ ಪಟೇಲ್.

Leave A Reply

Your email address will not be published.