ಸೇತುವೆಗೆ ಅಪ್ಪಳಿಸಿ ಎರಡು ತುಂಡಾಗಿ ಬಿದ್ದ ಕಿಯಾ ಸೆಲ್ಟೋಸ್ ಕಾರು | ಮೂರು ಸಾವು
ನಾಗ್ಪುರದಿಂದ ಚಿಂದ್ವಾರ ಕಡೆಗೆ ಸಾಗುವ ರಸ್ತೆಯಲ್ಲಿ ರಣ ಭೀಕರ ಅಪಘಾತವಾಗಿದ್ದು ಕಾರಿನಲ್ಲಿದ್ದ ಮೂರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ತೀವ್ರತೆಗೆ ಕಿಯಾ ಸೆಲ್ಟೋಸ್ ಕಾರು ಅಪಘಾತ ಎರಡು ತುಂಡಾಗಿ ಅಕ್ಕ ಪಕ್ಕ ಬಿದ್ದಿದೆ. ಈ ಕಾರು ಅತ್ಯಂತ ವೇಗವಾಗಿ ಬಂದು ಸೇತುವೆಗೆ ಡಿಕ್ಕಿ ಹೊಡೆದು ಬಿದ್ದಿದೆ ಎನ್ನಲಾಗಿದೆ.
2018 ಕ್ಕೆ ಭಾರತದ ಕಾರು ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಕಿಯಾ ಕಾರು ಅತ್ಯುತ್ತಮ ಸೇಫ್ಟಿ ಪಿಚ್ಚರ್ ತುಂಬಿಕೊಂಡು ರಸ್ತೆ ಗೆ ಇಳಿದಿತ್ತು. 6 ಏರ್ ಬ್ಯಾಗ್, ಎಬಿಡಿ, ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ, ಎಮರ್ಜೆನ್ಸಿ ವೆಹಿಕಲ್ ಸ್ಟಾಪ್ ಮುಂತಾದ ಹೈಯರ್ ಅಂಡ್ ಸೇಫ್ಟಿ ಇರುವ ವೆಹಿಕಲ್ ಇದಾಗಿದೆ.
ಇಂತಹ ಇದೀಗ ಎರಡು ತುಂಡಾಗಿ ಬಿದ್ದಿರುವುದು ಆತಂಕ ಮೂಡಿಸಿದ್ದು, ಜೊತೆಗೆ ಈ ಕಾರಿನ ಸೇಫ್ಟಿ ಬಗ್ಗೆ ಅನುಮಾನ ಹುಟ್ಟಿಸಿದೆ. ಇಷ್ಟೆಲ್ಲಾ ಸುರಕ್ಷತಾ ಕ್ರಮಗಳು ಇರುವ ಕಾರ್ ಆಗಿದ್ದರೂ ನಿಜಜೀವನದಲ್ಲಿ ಅಪಘಾತದ ತೀವ್ರತೆ ಯಾವ ರೀತಿ ಇರುತ್ತದೆ ಎಂಬುದನ್ನು ಹೇಳಲಿಕ್ಕಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.
ಕಾರು ಎರಡು ತುಂಡಾಗಿರುವ ಕಾರಣ ಕಂಪನಿ ಅಪಘಾತದ ತನಿಖೆಗೆ ಇಳಿದಿದೆ. ಕಾರನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಕಾರನ್ನು ಯಂತ್ರಗಳ ಸಹಾಯದಿಂದ ತುಂಡರಿಸಿದ ಲಕ್ಷಣಗಳು ಗೋಚರಿಸುತ್ತಿವೆ. ಬಹುಶಃ ಕಾರಿನಲ್ಲಿ ಯಾರೋ ಸಿಕ್ಕಿ ಕೊಂಡಿರಬಹುದು. ಅವರನ್ನು ರಕ್ಷಿಸಲು ವಾಹನವನ್ನು ತುಂಡರಿಸುವ ಪ್ರಸಂಗ ಬಂದಿರಬಹುದು ಎಂದು ಅಂದಾಜಿಸಲಾಗಿದೆ.