ಮಾನಸಿಕ ಅಸ್ವಸ್ಥ ರಾಯ್ ಡಿಸೋಜ ಲಾಕ್ ಅಪ್ ಡೆತ್ | 8 ಪೊಲೀಸರ ಅಮಾನತು

ವಿರಾಜಪೇಟೆಯಲ್ಲಿ ನಡೆದಿದ್ದ ಮಾನಸಿಕ ಅಸ್ವಸ್ಥ ರಾಯ್ ಡಿಸೋಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ವಲಯ ಐಜಿಪಿ ಪ್ರವೀಣ್ ಪವಾರ್ ಎಂಟು ಪೊಲೀಸರನ್ನು ಸಸ್ಪೆಂಡ್ ಮಾಡಿದ್ದಾರೆ.

ವಿರಾಜಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಮತ್ತು ಸ್ಥಳ ಪರಿಶೀಲನೆ ಮಾಡಿದ ಅವರು, ಮೇಲ್ನೋಟಕ್ಕೆ ಪೊಲೀಸರ ವಿರುದ್ಧದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಹೆಡ್ ಕಾನ್ಸೆಬಲ್ ಸೇರಿದಂತೆ ಎಂಟು ಮಂದಿಯನ್ನು ಅಮಾನತು ಮಾಡಿದ್ದಾರೆ.

ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ಪೊಲೀಸರ ಹಲ್ಲೆಯಿಂದ ರಾಯ್ ಡಿಸೋಜ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಅರೋಪಿಸಿದ್ದಾರೆ. ಅವರ ಸಹೋದರರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಇದರಿಂದ ಸ್ಥಳದಲ್ಲೇ ಎಂಟು ಮಂದಿಯನ್ನು ಸೇವೆಯಿಂದ ಅಮಾನತು ಮಾಡುತ್ತಿದ್ದೇನೆ ಎಂದು ಐಜಿಪಿ ಪ್ರವೀಣ್ ಪವಾರ್ ಆದೇಶ ಮಾಡಿದರು.

ಡಿವೈಎಸ್‌ಪಿ ಜಯಕುಮಾರ್ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಪೊಲೀಸರ ವಿರುದ್ಧದ ಆರೋಪ ಸಾಬೀತಾಗಿದೆ.
ಇದರಿಂದ ಸ್ಥಳದಲ್ಲಿ ಎಂಟು ಮಂದಿಯನ್ನು ಸೇವೆಯಿಂದ ಅಮಾನತು ಮಾಡುತ್ತಿದ್ದೇನೆ ಎಂದು ಐಜಿಪಿ ಪ್ರವೀಣ್ ಪವಾರ್ ಆದೇಶ ಮಾಡಿದರು.

ಮಾಧ್ಯಮಗೋಷ್ಟಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಡಿವೈಎಸ್‌ಪಿ ಜಯಕುಮಾರ್, ಪಟ್ಟಣ ಪಂಚಾಯತ್ ಸದಸ್ಯ ಆಗಸ್ಟಿನ್ ಬೆನ್ನಿ, ಪೃಥ್ವಿರಾಜ್, ಯುವ ಕಾಂಗ್ರೆಸ್ ನಾಯಕ ಉಮರ್ ಫಾರೂಕ್, ಜಾನ್ಸನ್, ಮರ್ವಿನ್ ಲೋಬೋ, ಶಬೀರ್ ಮತ್ತಿರರು ಉಪಸ್ಥಿತರಿದ್ದರು.

ಜೂನ್ 9ರ ರಾತ್ರಿ 10.30 ಅಕ್ಕೆ ಡಿಸೋಜ ಮನೆಯಿಂದ ಹೊರಗೆ ಹೋಗಿದ್ದು, ರಸ್ತೆಯಲ್ಲಿ ಗೊತ್ತುಗುರಿ ಇಲ್ಲದೆ ಓಡಾಡುತ್ತಿದ್ದ. ಈ ವೇಳೆ, ಬೀಟ್ ಪೋಲೀಸರು ಆತನನ್ನು ಗಮನಿಸಿ ಪೋಲೀಸ ಠಾಣೆಗೆ ಕರೆತಂದಿದ್ದರು. ಈ ಮಧ್ಯೆ ಅತ ಪೊಲೀಸರ ಮೇಲೆ ಕತ್ತಿ ಬೀಸಿದ್ದ ಎಂಬ ಕಥೆ ಸುತ್ತಿದ್ದಾರೆ ಪೊಲೀಸರು. ರಾಯ್ ಡಿಸೋಜ ಅವರನ್ನು ಪೊಲೀಸರು ಠಾಣೆಗೆ ಕರೆದೊಯ್ದು ಮೃಗೀಯವಾಗಿ ಹಿಂಸೆ ನೀಡಿದ್ದು, ಮನ ಬಂದಂತೆ ಥಳಿಸಿದ ಹಿನ್ನೆಲೆಯಲ್ಲಿ ಅವರು ಮೃತಪಟ್ಟಿದ್ದಾರೆ. ರಾಯ್ ಡಿಸೋಜ ಅವರ ತಾಯಿ ಮೆಟಿಲ್ಲಾ ಡಿಸೋಜ ಮತ್ತು ಕುಟುಂಬಸ್ಥರು ದೂರು ನೀಡಿದ್ದರು. ಸಾರ್ವಜನಿಕರು ಪ್ರತಿಭಟನೆ ಕೈಗೊಂಡಿದ್ದರು. ಆ ಹಿನ್ನೆಲೆಯಲ್ಲಿ ಈಗ 8 ಪೊಲೀಸರನ್ನು ಅಮಾನತು ಮಾಡಲಾಗಿದೆ.

ಇನ್ನುಮುಂದೆ ಇಂತಹ ಘಟನೆಗಳು ನಡೆಯದಂತೆ
ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಗಮನಹರಿಸಬೇಕು, ಹಾಗೂ ಮೃತರ ಕುಟುಂಬಕ್ಕೆ ಸೂಕ್ತರೀತಿಯ ಪರಿಹಾರವನ್ನು ನೀಡಬೇಕೆಂದು ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪರವಂಡ ಸಿರಾಜ್ ಅವರು ಆಗ್ರಹಿಸಿದ್ದಾರೆ.

Leave A Reply

Your email address will not be published.