Ad Widget

ದ.ಕ ಜಿಲ್ಲೆಯಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ | ಬೆಳಗ್ಗೆ 6 ರಿಂದ 12 ಗಂಟೆವರೆಗೆ ಗ್ಯಾರೇಜ್, ಆಪ್ಟಿಕಲ್ ಶಾಪ್ ತೆರೆಯಲು ಅನುಮತಿ

ಮಂಗಳೂರು: ಕೊರೋನಾ ಎರಡನೇ ಅಲೆ ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈ ಹಿಂದಿನ ಲಾಕ್ ಡೌನ್ ನನ್ನು ಮೊದಲಿನಂತೆಯೇ ಪಾಲಿಸಲು ದ.ಕ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಮುಂಜಾನೆ 6 ರಿಂದ 12 ವರೆಗೆ ಶೋ ರೂಂ ಹೊರತುಪಡಿಸಿ ಗ್ಯಾರೇಜ್, ಅಧಿಕೃತ ವಾಹನ ಸೇವಾ ಕೇಂದ್ರ ಹಾಗೂ ಆಪ್ಟಿಕಲ್ ಶಾಪ್ ತೆರೆಯಲು ಅವಕಾಶ ನೀಡಲಾಗಿದೆ. ಇನ್ನೊಂದು ವಾರ ಮುಂದೂಡಲ್ಪಟ್ಟ ಲಾಕ್ ಡೌನ್ ನಲ್ಲಿ ಈ ಹೊಸ ಗೈಡ್ ಲೈನ್ಸ್ ಅನ್ನು ನೀಡಲಾಗಿದೆ.

ಇನ್ನುಳಿದಂತೆ ದ.ಕ ಜಿಲ್ಲೆಯಲ್ಲಿ ಬೇರೆ ಯಾವುದೇ ಚಟುವಟಿಕೆಗಳಿಗೆ ಅನುಮತಿ ನೀಡಿಲ್ಲ.

ಈ ಆದೇಶ ಜೂ 12 ರಿಂದಲೇ ಅನ್ವಯ ಆಗಲಿದ್ದು, ಸಾರ್ವಜನಿಕರು ಈಗ ಜಾರಿಯಲ್ಲಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಲ್ಲಿ, ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: