Ad Widget

ನೆಲ್ಯಾಡಿ | ಒಂದೇ ಪ್ರದೇಶದಲ್ಲಿ ಒಂದೇ ಬಾರಿಗೆ 23 ಕೋವಿಡ್ ಪಾಸಿಟಿವ್ ಪ್ರಕರಣ

ಕಡಬ: ತಾಲೂಕಿನ ನೆಲ್ಯಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದೇ ಪ್ರದೇಶದಲ್ಲಿ ಒಂದೇ ಬಾರಿಗೆ ಕೊರೋನಾ ಸ್ಫೋಟ ಸಂಭವಿಸಿದ್ದು, ಬರೋಬ್ಬರಿ 23 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಗ್ರಾಮದ ರಾಮನಗರ ವಾರ್ಡ್ ಪ್ರದೇಶದಲ್ಲಿ ಮನೆಮನೆಗೆ ತೆರಳಿ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಇಂದು ಅದರ ವರದಿ ಬಂದಿದ್ದು ಬರೋಬ್ಬರಿ 23 ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಒಂದೇ ಮನೆಯ 5 ಜನರಿಗೆ ಸೋಂಕು ಖಚಿತಗೊಂಡಿದೆ.

ಇನ್ನುಳಿದಂತೆ ಕೆಲವು ಮನೆಗಳಲ್ಲಿ ಒಂದರಿಂದ ಮೂರು ಪ್ರಕರಣಗಳು ದಾಖಲಾಗಿದೆ. ವರದಿ ಬಂದ ನಂತರ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸೋಂಕಿತರ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗಳು ತಿಳಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: