ಸ್ವಾಮಿ ನಿತ್ಯಾನಂದ ಕಾಲಿಟ್ಟರೆ ಭಾರತದಲ್ಲಿ ಕೋರೊನಾ ಖಲಾಸ್ !

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಆವಾಗವಾಗ ಸುದ್ದಿಯಲ್ಲಿರುವ ವ್ಯಕ್ತಿ.ಕೊರೊನಾ ಕರಿಛಾಯೆಯಲ್ಲಿ ಬಳಲುತ್ತಿರುವ ನಮ್ಮ ಭಾರತಕ್ಕೆ ನಿತ್ಯಾನಂದನ ಪಾದಸ್ಪರ್ಶವಾದರೆ ಕೊರೊನಾ ದೇಶ ಬಿಟ್ಟು ಓಡಿ ಹೋಗುತ್ತದೆಯಂತೆ.

 

ಹಾಗಂತ ಈ ವಿಚಾರವನ್ನು ಬೇರೆ ಯಾರೋ ಹೇಳಿದ್ದಲ್ಲ,ಮಾಡ ಬಾರದ್ದನ್ನು ಮಾಡಿ ದೇಶ ಬಿಟ್ಟು ಹೋಗಿರುವ ಸ್ವ ಘೋಷಿತ ದೇವಮಾನವ ಲಾಫಿಂಗ್ ಸ್ವಾಮಿ ಬಿಡದಿ ನಿತ್ಯಾನಂದ.

ಭಾರತದಲ್ಲಿ ಕೊರೋನಾ ಕೊನೆಗಾಣಬೇಕಾದರೆ, ನಾನೊಬ್ಬನೇ ಪರಿಹಾರ ಎಂಬ ಈತನ ಉವಾಚ ಎಲ್ಲೆಡೆ ಭಾರೀ ವೈರಲ್ ಆಗಿದೆ.

ನನ್ನ ಪಾದ ಸ್ಪರ್ಶದಿಂದ ಭಾರತದಲ್ಲಿ ಕೊರೋನಾ ಅಂತ್ಯವಾಗುತ್ತದೆ ಎಂದು ಕೆಲ ದಿನಗಳ ಹಿಂದೆ ಈ ಹೇಳಿಕೆ ನೀಡಿದ್ದಾನೆ.

ಭಕ್ತರೊಬ್ಬರು ಭಾರತ ಯಾವಾಗ ಕೊರೊನಾ ಮುಕ್ತವಾಗುತ್ತದೆ ಎಂಬ ಪ್ರಶ್ನೆಗೆ ನಿತ್ಯಾನಂದ ಉತ್ತರಿಸಿದ್ದು, “ಅಮ್ಮನ್ ದೇವಿಯ ಆತ್ಮವು ನನ್ನ ಪವಿತ್ರವಾದ ದೇಹವನ್ನು ಪ್ರವೇಶಿಸಿದೆ. ನಾನು ಭಾರತಕ್ಕೆ ಕಾಲಿಟ್ಟಾಗ ಭಾರತವು ಕೊವಿಡ್ 19ನಿಂದ ವಿಮೋಚನೆ ಹೊಂದುತ್ತದೆ. ನಾನು ಜ್ಯೋತಿರ್ಲಿಂಗ ದರ್ಶನ ಮಾಡಬೇಕು ಎಂದಿದ್ದೆ. ಆದರೆ ಕೆಲವು ಪಾಪಿಗಳು ನನ್ನನ್ನು ದೇಶ ಬಿಟ್ಟು ಓಡಿಸಿದರು. ಭಾರತದಲ್ಲಿ ಕೊರೋನಾ ಬರುತ್ತದೆಯೆಂದು ನನಗೆ ಮೊದಲೇ ಗೊತ್ತಿತ್ತು. ಅದಕ್ಕಾಗಿಯೇ ನಾನು ಕೈಲಾಸಕ್ಕೆ ಬಂದೆ ” ಎಂದು ಹೇಳಿದ್ದಾನೆ.

ಸದ್ಯ ನಿತ್ಯಾನಂದ ದಕ್ಷಿಣ ಅಮೆರಿಕದ ಈಕ್ವೆಡಾರ್‌ನಿಂದ ಖಾಸಗಿ ದ್ವೀಪವೊಂದನ್ನು ಖರೀದಿಸಿ ಅದನ್ನು ಸ್ವಾಯತ್ತ ದೇಶ ಎಂಬುದಾಗಿ ಘೋಷಿಸಿಕೊಂಡಿದ್ದಾನೆ. ತನ್ನ ದೇಶಕ್ಕೆ ಕೈಲಾಸ ಎಂಬುದಾಗಿಯೂ ನಿತ್ಯಾನಂದ ಹೆಸರನ್ನು ಇಟ್ಟಿದ್ದಾನೆ.

ಕೈಲಾಸ ದ್ವೀಪದಲ್ಲಿ ನಿತ್ಯಾನಂದನ ಸಾವಿರ ಭಕ್ತರು ತಂಗಿದ್ದಾರೆ.
ತನ್ನ ದ್ವೀಪಕ್ಕೆ ಸ್ವತಂತ್ರ ದೇಶದ ಸ್ಥಾನಮಾನ ನೀಡುವಂತೆ ವಿಶ್ವಸಂಸ್ಥೆಗೂ ಪತ್ರ ಬರೆದು ನಿತ್ಯಾನಂದ ಸುದ್ದಿಯಾಗಿದ್ದ. ಆದರೆ, ಕೈಲಾಸಕ್ಕೆ ಇನ್ನೂ ದೇಶದ ಸ್ಥಾನಮಾನ ಲಭ್ಯವಾಗಿಲ್ಲ. ಅದು ಈಗಲೂ ಈಕ್ವೆಡಾರ್‌‌ನ ಸ್ವಾಧೀನದಲ್ಲಿಯೇ ಇದೆ.

Leave A Reply

Your email address will not be published.