Tirupati: ತಿರುಪತಿಯಲ್ಲಿ ಕಾಲ್ತುಳಿತ- 6 ಭಕ್ತರು ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ!! ಮನಮಿಡಿಯುವ ವಿಡಿಯೋ ವೈರಲ್

Tirupati: ತಿರುಪತಿಯಲ್ಲಿ ಭಕ್ತಾದಿಗಳ ನಡುವೆ ಕಾಳ್ತುಲಿತ ಉಂಟಾಗಿ 6 ಮಂದಿ ಭಕ್ತಾದಿಗಳು ಸ್ಥಳದಲ್ಲಿ ಮೃತಪಟ್ಟು, ಇಪ್ಪತ್ತಕ್ಕೂ ಹೆಚ್ಚು ಮಂದಿ ಭಕ್ತಾದಿಗಳ ಸ್ಥಿತಿ ಗಂಭೀರವಾಗಿರುವಂತಹ ಮನಮಿಡಿಯುವ ಘಟನೆ ನಡೆದಿದೆ.

ಹೌದು, ತಿರುಪತಿಯ(Tirupati) ವಿಷ್ಣು ನಿವಾಸಂನಲ್ಲಿ ಈ ಕಾಲ್ತುಳಿತ ಉಂಟಾಗಿದೆ. ವಿಷ್ಣು ನಿವಾಸಂನಲ್ಲಿ ವೈಕುಂಠದ್ವಾರದ ಸರ್ವದರ್ಶನಂ ಟೋಕನ್ ವಿತರಣೆ ಮಾಡಲಾಗುತ್ತಿತ್ತು. ಈ ವೇಳೆ 4 ಸಾವಿರಕ್ಕೂ ಹೆಚ್ಚು ಭಕ್ತರು ಟಿಕೆಟ್‌ಗಾಗಿ ಮುಗಿಬಿದ್ದ ಕಾರಣ ಕಾಲ್ತುಳಿತ ಸಂಭವಿಸಿ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

 

ಇನ್ನು ಕಾಲ್ತುಳಿತಕ್ಕೆ ಸಿಕ್ಕು ಘಟನೆಯಲ್ಲಿ ಇಪ್ಪತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿ ತಿರುಮಲ ತಿರುಪತಿ ದೇವಸ್ಥಾನದ ಮಂಡಳಿಯ ಅಧ್ಯಕ್ಷ ಬಿಆರ್ ನಾಯ್ಡು ತುರ್ತು ಸಭೆಯನ್ನು ಕರೆದಿದ್ದಾರೆ.

Comments are closed.