ಹಿರಿಯ ಸಹಕಾರಿ ಧುರೀಣ ಡಾ. ಜಿ. ವೆಂಕಟ್ರಮಣ ಭಟ್ ಕೋರೆಕ್ಕಾನ ನಿಧನ

ಸುಳ್ಯ ಕನಕಮಜಲು ಗ್ರಾಮದ ಕೋರೆಕ್ಕಾನ ನಿವಾಸಿ, ಹಲವು ವರ್ಷಗಳಿಂದ ಕನಕಮಜಲಿನಲ್ಲಿ ವೈದ್ಯರಾಗಿ, ಅಂಚೆಪಾಲಕರಾಗಿ ಸೇವೆ ಸಲ್ಲಿಸಿದ್ದ ಡಾ. ಜಿ.ವೆಂಕಟ್ರಮಣ ಭಟ್ ಅವರು ಹೃದಯಾಘಾತದಿಂದಾಗಿ ಜೂ.7ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ಕನಕಮಜಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ವೆಂಕಟ್ರಮಣ ಭಟ್ ಅವರು ಪುತ್ರರಾದ ರಮೇಶ್ ಭಟ್, ಗಣೇಶ್ ಭಟ್, ಪುತ್ರಿ ವೀಣಾ, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.

Leave A Reply

Your email address will not be published.