ಕಕ್ಕಿಂಜೆಯಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ | ಆರೋಪಿಯ ಬಂಧನ

ಬೆಳ್ತಂಗಡಿ : ಅಪ್ರಾಪ್ತ ಬಾಲಕಿಯೋರ್ವಳಿಗೆ ವ್ಯಕ್ತಿಯೊರ್ವ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ ನಡೆದಿದೆ.ಕೃತ್ಯ ಎಸಗಿದ ಆರೋಪಿ ವಿಘ್ನೇಶ್ ಭಂಡಾರಿಯನ್ನು ಧರ್ಮಸ್ಥಳ ಪೊಲೀಸರು ನಿನ್ನೆ ತಡರಾತ್ರಿ ಬಂಧಿಸಿದ್ದಾರೆ.

ಆರೋಪಿಯು ಈ ಮೊದಲೊಮ್ಮೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಬಗ್ಗೆ ಯಾವುದೇ ದೂರು ದಾಖಲಾಗಿರಲಿಲ್ಲ.ಆದರೆ ಇದೀಗ ವ್ಯಕ್ತಿಯು ಮತೊಮ್ಮೆ ತನ್ನ ಹಳೇ ಚಾಳಿ ಮುಂದುವರಿಸಿದ್ದಾನೆ ಎನ್ನಲಾಗಿದೆ.

ನಾಲ್ಕು ವರ್ಷ ಪ್ರಾಯದ ಆ ಅನ್ಯ ಕೋಮಿನ ಹುಡುಗಿ ಮನೆಗೆ ಬರುವಾಗ ಅಳುತ್ತಾ ಬಂದಿದ್ದಳು. ಆಗ ಹೆತ್ತವರು ಆಕೆಯನ್ನು ವಿಚಾರಿಸಿದ್ದಾರೆ. ಆಗ ಆ ಹುಡುಗಿ, ತನಗೆ ಮೊಬೈಲಿನಲ್ಲಿ ಎಂತದ್ದೋ ತೋರಿಸಿದ್ದಾಗಿ ಹೇಳಿದ್ದಾಳೆ. ಅಲ್ಲದೆ, ತನ್ನನ್ನು ಬೇಡದ ಕಡೆ ಮುಟ್ಟಿದ ವಿಷಯ ಹೆಲ್ಕೊಂಡಿದ್ದಾಳೆ ಎನ್ನಲಾಗಿದೆ.

ಈ ಬಗ್ಗೆ ತಮ್ಮ ಪಕ್ಕದ ಮನೆಯ, ಇದೀಗ ಆರೋಪಿಯಾಗಿರುವ ವಿಘ್ನೇಶ್ ಭಂಡಾರಿ ವಿರುದ್ಧ ಸಂತ್ರಸ್ತೆಯ ಹೆತ್ತವರು ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಆರೋಪಿಯು ಪೊಲೀಸರ ವಶದಲ್ಲಿದ್ದು ಎಫ್.ಐ.ಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಸಂತ್ರಸ್ಥೆ ಬಾಲಕಿ ಸರ್ಕಾರಿ ಆಸ್ಪತ್ರೆಗೆ ದಾಖಲಾದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave A Reply

Your email address will not be published.