ಸ್ಕೂಟಿ ಗುದ್ದಿಸಿದ ಮುಸ್ಲಿಂ ಹುಡುಗಿಯ ಕಡೆಯವರಿಂದ ಅಮಾಯಕ ಹುಡುಗನ ಮೇಲೆ ಮಾರಣಾಂತಿಕ ಹಲ್ಲೆ

ಮಂಗಳೂರು: ಬೈಕ್ ಸವಾರನೋರ್ವನಿಗೆ ಸ್ಕೂಟಿ ಚಲಾಯಿಸುತ್ತಿದ್ದ ಮುಸ್ಲಿಂ ಯುವತಿಯೋರ್ವಳು ಢಿಕ್ಕಿ ಹೊಡೆದ ಘಟನೆಯನ್ನೇ ಮುಂದುವರಿಸಿಕೊಂಡು ಇಂದು ಯುವತಿಯ ತಮ್ಮಎಂದುಕೊಂಡಿರುವ ಮತ್ತು ಮತ್ತಿಬ್ಬರು ಸೇರಿ ಅಮಾಯಕ ಬೈಕ್ ಸವಾರನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.

 

ಉಳ್ಳಾಲ ಧರ್ಮನಗರ ನಿವಾಸಿ ದಿವಾಕರ್ (34)ಹಲ್ಲೆಗೊಳಗಾದ ಅಮಾಯಕ ಯುವಕ.

ದಿವಾಕರ್ ಅವರು ಉಳ್ಳಾಲದ ಖಾಸಗಿ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೊನ್ನೆ ಬೆಳಿಗ್ಗೆ  ಸುಮಾರು ಒಂಬತ್ತು ಗಂಟೆಯ ಸಮಯ. ಅವರು ಉಳ್ಳಾಲದ ಅಬ್ಬಕ್ಕ ಸರ್ಕಲ್ ನ ATM ಸೆಂಟರ್ ಬಳಿ  ಚಲಾಯಿಸುತ್ತಿದ್ದ ಬೈಕನ್ನು ಧರ್ಮನಗರದ ಕಡೆಗೆ ತಿರುಗಿಸುತ್ತಿದ್ದರು. ಈ ವೇಳೆ ವೇಳೆ ಹಿಂದಿನಿಂದ ಸ್ಕೂಟಿಯಲ್ಲಿ ಬಂದ ಯುವತಿ ದಿವಾಕರ್ ಅವರ ಬೈಕ್‌ ಢಿಕ್ಕಿ ಹೊಡೆದಿದೆ.
ಯುವತಿ ಮತ್ತು ದಿವಾಕರ್ ಅವರ ದ್ವಿಚಕ್ರ ವಾಹನಗಳು ಜಖಂಗೊಂಡಿದ್ದು ಇಬ್ಬರ ನಡುವೆ ವಾದ ವಿವಾದ ಸಹಜವಾಗಿ ನಡೆದಿದೆ.

ಈ ವೇಳೆ, ತನ್ನ ತಪ್ಪಿಲ್ಲದ ದಿವಾಕರ್ ಪೊಲೀಸ್ ಠಾಣೆಗೆ ತೆರಳೋದಕ್ಕೆ ಮುಂದಾಗಿದ್ದಾರೆ. ಆಗ ಯುವತಿ ದಿವಾಕರ್ ಜತೆ ಮಾತನಾಡಿ, ನನ್ನ ಸಹೋದರ ನಿಮ್ಮಲ್ಲಿ ಮಾತನಾಡುತ್ತಾನೆ, ನಂಬರ್ ಕೊಡಿ ಎಂದು ಮೊಬೈಲ್ ನಂಬರ್ ಕೇಳಿ ಪಡೆದು ಹೋಗಿದ್ದಾಳೆ.

ಅದೇ ದಿನ ರಾತ್ರಿ ದಿವಾಕರ್ ಅವರಿಗೆ ಕರೆ ಮಾಡಿದ  ಯುವತಿಯ ಸಹೋದರನೆಂದು ಹೇಳಿಕೊಂಡ ವ್ಯಕ್ತಿ ಮಾತಾನಾಡಲು ಸಿಗುವಂತೆ ಹೇಳಿದ್ದಾನೆ. ನಿನ್ನೆ ಸಂಜೆ 6 ಗಂಟೆಗೆ ಮತ್ತೆ ಕರೆ ಮಾಡಿದ ಅದೇ ವ್ಯಕ್ತಿ ಧರ್ಮನಗರ ರಝಾಕ್ ಎಂಬವರ ಅಂಗಡಿ ಮುಂಭಾಗ ದಿವಾಕರ್ ಅವರನ್ನು ಕರೆಸಿಕೊಂಡಿದ್ದಾನೆ. ನಿಮ್ಮಿಂದಾಗಿ ನಮ್ಮ ಸ್ಕೂಟಿ ಹಾಳಾಗಿದೆ. ಸ್ಕೂಟಿ ಜಖಂ ಗೊಂಡಿದ್ದರ ಖರ್ಚು 4,500 ರೂಪಾಯಿ ನೀಡುವಂತೆ ಒತ್ತಾಯಿಸಿದ್ದಾನೆ. ದಿವಾಕರ್ ಅವರು ತನ್ನ ಬೈಕ್ ಕೂಡ ಜಖಂಗೊಂಡಿದ್ದು ಅದರ ಖರ್ಚನ್ನು ಕೇಳಿದ್ದಾರೆ. ಇಬ್ಬರೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಆಗ ದಿವಾಕರ್ ಅವರು ಪೊಲೀಸ್ ನೀಡುವ ಎಂದು ಹೇಳಿದ್ದಾರೆ. ನಾನು ಪೋಲೀಸರಿಗೆ ಕೇಸು ಹಾಕುತ್ತೇನೆ ಎಂದು ಹೇಳಿದ್ದಾರೆ.

ಅಷ್ಟಕ್ಕೆ ಉರಿದುಬಿದ್ದ ಯುವತಿಯ ಸಹೋದರ ಮತ್ತು ಆತನ ಜೊತೆಯಲ್ಲಿದ್ದ ಇಬ್ಬರು ಯುವಕರು ಸೇರಿ ದಿವಾಕರ್ ಅವರಿಗೆ ಹೊಡೆದಿದ್ದಾರೆ. ಮತ್ತು ತಲೆಗೆ ಕಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಇದೀಗ ಗಾಯಾಳು ದಿವಾಕರ್ ಅವರು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರಣಾಂತಿಕ ಹಲ್ಲೆ ಆರೋಪಿಗಳ ಶೀಘ್ರ ಬಂಧನಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಒತ್ತಾಯ ಕೇಳಿ ಬಂದಿದೆ.

Leave A Reply

Your email address will not be published.