ಪುತ್ತೂರು | ಮನೆಯಿಂದ ಹೊರಗಡೆ ಹೋಗಿದ್ದ ಯುವತಿ ನಾಪತ್ತೆ

ಮನೆಯಿಂದ ಹೊರಗಡೆ ಹೋಗಿದ್ದ ಯುವತಿ ವಾಪಸ್ಸು ಮನೆಗೆ ಹಿಂತುರುಗದೆ ನಾಪತ್ತೆಯಾದ ಘಟನೆ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಕರ್ಗಲ್ಲು ಎಂಬಲ್ಲಿ ನಡೆದಿದೆ .

 

ನರಿಮೊಗರು ಗ್ರಾಮದ ಕರ್ಗಲ್ಲು ನಿವಾಸಿ ಅಣ್ಣುಪೂಜಾರಿ ಅವರ ಪುತ್ರಿ ವಿಜೇತ(23ವ) ನಾಪತ್ತೆಯಾದ ಯುವತಿ . ನಾಪತ್ತೆಯಾದ ವಿಜೇತ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಕಳೆದ ಹಲವಾರು ವರ್ಷಗಳಿಂದ ಹುಷಾರಿಲ್ಲದೇ ಮನೆಯಲ್ಲಿಯೇ ಇದ್ದರು.

ಜೂ.4ರಂದು ಬೆಳಿಗ್ಗೆ ಆಕೆ ವಾಸವಿದ್ದ ಮನೆಯಿಂದ ಹೊರಗೆ ತೆರಳಿದ್ದು ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಈ ಕುರಿತು ಎಲ್ಲಾ ಕಡೆ ಹುಡುಕಾಡಿ, ಸಂಬಂಧಿಕರಲ್ಲಿ ವಿಚಾರಿಸಿದರೂ ಅವರ ಸುಳಿವು ಸಿಕ್ಕಿಲ್ಲ.

ಕೊನೆಗೆ ಯುವತಿಯ ಪೋಷಕರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave A Reply

Your email address will not be published.