ಆಲೆಟ್ಟಿ ಪಿ.ಡಿ.ಒ. ಪಂಜಕ್ಕೆ, ಹಾಗೂ ಪಂಜ ಪಿ.ಡಿ.ಒ ಆಲೆಟ್ಟಿಗೆ‌ ವರ್ಗಾವಣೆ

ಪಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಣಿಯಾನ ಪುರುಷೋತ್ತಮರವರನ್ನು ಆಲೆಟ್ಟಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನಾಗಿ ಹಾಗೂ ಆಲೆಟ್ಟಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೀರ್ತಿಪ್ರಸಾದ್‌ರವರನ್ನು ಪಂಜ ಗ್ರಾ.ಪಂ. ಪಿ.ಡಿ.ಒ. ಆಗಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ವರ್ಗಾಯಿಸಿದ್ದಾರೆ.

ಜೊತೆಗೆ ಕೀರ್ತಿಪ್ರಸಾದ್‌ರವರಿಗೆ ಮುರುಳ್ಯ ಗ್ರಾ.ಪಂ.ಪಿ.ಡಿ.ಒ. ಪ್ರಭಾರವನ್ನು ಕೂಡಾ ವಹಿಸಲಾಗಿದೆ.

ಮುರುಳ್ಯ ಗ್ರಾ.ಪಂ. ಪಿ.ಡಿ.ಒ. ಆಗಿ ಪ್ರಭಾರದಲ್ಲಿದ್ದ ಶ್ರೀಧರ ಕೆ.ಆರ್.ರವರನ್ನು ಕಳಂಜ ಗ್ರಾ.ಪಂ. ಪಿ.ಡಿ.ಒ. ಆಗಿ ಪೂರ್ಣ ಜವಾಬ್ದಾರಿ ವಹಿಸಲಾಗಿದ್ದು, ಕಳಂಜ ಗ್ರಾ.ಪಂ. ಕಾರ್ಯದರ್ಶಿಯಾಗಿರುವ ಪದ್ಮಯ್ಯ ಕೆ.ಯವರನ್ನು ಪಂಜ ಗ್ರಾ.ಪಂ. ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.

Leave A Reply

Your email address will not be published.