ಕಾಶ್ಮೀರ | ಮೂವರು ಮುಸುಕುಧಾರಿಗಳಿಂದ ಬಿಜೆಪಿ ಮುಖಂಡನ ಹತ್ಯೆ
ಕಾಶ್ಮೀರ: ಬಿಜೆಪಿ ನಾಯಕ, ಮುನ್ಸಿಪಲ್ ಕೌನ್ಸಿಲರ್ ರಾಕೇಶ್ ಪಂಡಿತ್ ಅವರು ಮೂವರು ಅಪರಿಚಿತರ ಗುಂಡಿಗೆ ಬಲಿಯಾಗಿದ್ದಾರೆ.
ಪುಲ್ವಾಮಾ ಜಿಲ್ಲೆಯ ತ್ರಾಲ್ ಪ್ರದೇಶದ ಪಯೀನ್ ಪಟ್ಟಣದ ಬಳಿ ಬುಧವಾರ (ಜೂ.2) ಸಂಜೆ ಈ ದುರ್ಘಟನೆ ನಡೆದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಪಂಡಿತ್ ಅವರು ಕೊನೆಯುಸಿರೆಳೆದಿದ್ದಾರೆ.
ಘಟನೆಯಲ್ಲಿ ಪಂಡಿತ್ ಜತೆಗಿದ್ದ ಸ್ನೇಹಿತನ ಮಗಳ ಕಾಲಿಗೂ ಗುಂಡು ತಗುಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳು ಮುಸುಕುಧಾರಿಗಳಾಗಿ, ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಈ ಕೃತ್ಯ ಎಸಗಿದ್ದಾರೆ ಎಂಬುದು ತನಿಖೆ ನಂತರವೇ ತಿಳಿಯಲಿದೆ.