ಶಾಲೆಗೆ ಸ್ಕರ್ಟ್ ಧರಿಸಿ ಬರುತ್ತಿದ್ದಾರೆ ಇಲ್ಲಿನ ಪುರುಷ ಶಿಕ್ಷಕರು | ಇಲ್ಲಿದೆ ಇದರ ಹಿಂದಿನ ಅಸಲಿ ಕಹಾನಿ
ಸ್ಪೇನ್ ದೇಶದಲ್ಲಿ ಇದೀಗ ಹೊಸದೊಂದು ಟ್ರೆಂಡ್ ಶುರುವಾಗಿದೆ. ಅಲ್ಲಿನ ಶಾಲೆಗಳ ಮಹಿಳಾ ಶಿಕ್ಷಕರ ಜತೆ ಪುರುಷ ಶಿಕ್ಷಕರೂ ಸ್ಕರ್ಟ್ ಧರಿಸಿ ಶಾಲೆಗೆ ಬರಲಾರಂಭಿಸಿದ್ದಾರೆ. ಇದೇನು ವಿಚಿತ್ರ ಎಂದುಕೊಳ್ಳುತ್ತಿದ್ದೀರಾ??ಅಂದ ಹಾಗೆ ಇದಕ್ಕೂ ಒಂದು ಮುಖ್ಯ ಕಾರಣವಿದೆ.
ಇಲ್ಲಿನ ಶಾಲೆಯೊಂದರಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿಯೊಬ್ಬಳನ್ನು ಶಾಲೆಯಿಂದ ಡಿಬಾರ್ ಮಾಡಲಾಗಿದೆ. ಆಕೆ ಮೊಣಕಾಲಿಗಿಂತ ಮೇಲೆ ಸ್ಕರ್ಟ್ ಧರಿಸಿದ್ದಳು ಎನ್ನುವ ಒಂದೇ ಒಂದು ಕಾರಣಕ್ಕೆ ಆಕೆಯನ್ನು ಶಾಲೆಯಿಂದ ಹೊರ ಹಾಕಲಾಗಿದೆ.
ಇದು ಅವಳ ಪೋಷಕರ ಮತ್ತು ಪೋಷಕರ ಸಂಘದವರ ಕೋಪಕ್ಕೆ ಕಾರಣವಾಗಿದೆ. ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲೆಡೆ ಈ ವಿಷಯದ ಕುರಿತಾಗಿ ಪ್ರಚಾರ ನಡೆಸಿದ್ದಾರೆ. ಈ ಕಾರಣದಿಂದಾಗಿ ಶಾಲೆಯ ಧೋರಣೆಯ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾವೆಲ್ಲರೂ ವಿದ್ಯಾರ್ಥಿನಿಗೆ ಬೆಂಬಲ ನೀಡುವುದಾಗಿ ಅನೇಕರು ಹೇಳಿದ್ದಾರೆ.
ಶಾಲೆಯಿಂದ ಹೊರ ಹಾಕಲ್ಪಟ್ಟ ವಿದ್ಯಾರ್ಥಿನಿ ಪರವಾಗಿ ಶಾಲೆಯ ಅನೇಕ ಶಿಕ್ಷಕರೂ ಧ್ವನಿ ಎತ್ತಲಾರಂಭಿಸಿದ್ದಾರೆ. ಹಾಗಾಗಿ ಶಾಲೆಗಳ ಪುರುಷ ಶಿಕ್ಷಕರು ಸ್ಕರ್ಟ್ ಧರಿಸಿ ಶಾಲೆಗೆ ಬಂದು ಪಾಠ ಮಾಡಲಾರಂಭಿಸಿದ್ದಾರೆ.
ಏನೇ ಆಗಲಿ ಈ ಟ್ರೆಂಡ್ ವಿಚಿತ್ರವಾಗಿದ್ದರೂ ಅದರ ಹಿಂದಿನ ಅಸಲಿ ಕಾರಣ ತುಂಬಾ ಒಳ್ಳೆಯದೇ ಆಗಿದೆ. ಈ ರೀತಿ ಪ್ರತಿಭಟನೆಯಿಂದಾದರೂ ವಿದ್ಯಾರ್ಥಿನಿಯನ್ನು ಶಾಲೆಗೆ ಪುನಃ ದಾಖಲಾತಿ ಮಾಡಿಕೊಳ್ಳುವರೇ ಎಂದು ಕಾದುನೋಡಬೇಕಿದೆ.
ಶಾಲಾ ವಿದ್ಯಾರ್ಥಿನಿಗೆ ಈ ರೀತಿಯ ಬೆಂಬಲ ನೀಡುತ್ತಿರುವ ಶಿಕ್ಷಕರಿಗೆ ಅನೇಕ ಮೆಚ್ಚುಗೆಯ ಮಾತುಗಳು ವ್ಯಕ್ತವಾಗುತ್ತಿವೆ.