ಕಾರ್ಕಳ | ಆಕಸ್ಮಿಕವಾಗಿ ಬಾವಿಗೆ ಬಿದ್ದ ಇಬ್ಬರನ್ನು ರಕ್ಷಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು

ಕಾರ್ಕಳ : ನಗರದ ಮಾರ್ಕೆಟ್ ರಸ್ತೆ ಬಳಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ಇಬ್ಬರನ್ನು ಕಾರ್ಕಳ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ. ಮೇ 30ರಂದು ರಾತ್ರಿ ಕಾಲು ಜಾರಿ 53 ವರ್ಷದ ವ್ಯಕ್ತಿಯೋರ್ವರು ಬಾವಿಗೆ ಬಿದ್ದಿದ್ದರು. ಇದನ್ನು ಕಂಡು ಅವರ ರಕ್ಷಣೆಗೆ ಮತ್ತೋರ್ವರು ಬಾವಿಗಿಳಿದರು. ಇಬ್ಬರಿಗೂ ಬಾವಿಯಿಂದ ಮೇಲಕ್ಕೆ ಬರಲಾರದೇ ಒದ್ದಾಡುತ್ತಿದ್ದರು.

 

ಕೂಡಲೇ ಸ್ಥಳೀಯರು ಕಾರ್ಕಳ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬಾವಿಗೆ ಬಿದ್ದಿರುವ ಇಬ್ಬರನ್ನೂ ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಂ. ಸಂಜೀವ, ದಫೆದಾರ್ ಹೊನ್ನಯ್ಯ, ಸಿಬ್ಬಂದಿಗಳಾದ ಚಂದ್ರಶೇಖರ್, ಜಯ ಮೂಲ್ಯ, ನಿತ್ಯಾನಂದ, ಹಸನ್ ಸಾಬ್, ಗೃಹರಕ್ಷಕ ದಳದ ಸಂದೀಪ್ ಇದ್ದರು.

Leave A Reply

Your email address will not be published.