ಪುಲ್ವಾಮ ದಾಳಿಯಲ್ಲಿ ಹುತಾತ್ಮ ಯೋಧ ಮೇಜರ್ ಧೌಂಡಿಯಾಲ್ ಪತ್ನಿ ನಿಕಿತಾ ಕೌಲ್ ಸೇನೆಗೆ ಸೇರ್ಪಡೆ | ಪತಿ ಸಂಚರಿಸಿದ್ದ ಹಾದಿಯಲ್ಲಿ ನಾನೂ ಸಂಚರಿಸುವೆ
2019ರಲ್ಲಿ ಪುಲ್ವಾಮಾ ಬಾಂಬ್ ದಾಳಿಯಿಂದ 40 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇವರಲ್ಲಿ ಭಾರತೀಯ ಸೇನಾಧಿಕಾರಿ ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್ ಕೂಡ ಸೇರಿದ್ದರು.
ಇದೀಗ ದೌಂಡಿಯಾಲ್ ಅವರ ಪತ್ನಿ ನಿಕಿತಾ ಕೌಲ್ ಭಾರತೀಯ ಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ತಮಿಳುನಾಡಿನ ಸೇನಾ ಕೇಂದ್ರದಲ್ಲಿ ತರಬೇತಿ ಸಂಪೂರ್ಣಗೊಳಿಸಿ ಇದೀಗ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ.
ಅವರ ಪತಿ ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್ ಪುಲ್ವಾಮಾದಲ್ಲಿ ಬಾಂಬ್ ಸ್ಫೋಟದ ರೂವಾರಿಗಳ ಜಾಡು ಹಿಡಿದು ಜಮ್ಮು ಕಾಶ್ಮೀರದಲ್ಲಿ ನಡೆದ ಆಪರೇಷನ್ ನ ಭಾಗವಾಗಿದ್ದರು.
ಜೆಇಎಂ ಉಗ್ರರ ಕಮಾಂಡರ್ ಆಗಿದ್ದ ಕಮ್ರಾನ್ ನನ್ನು ಹೊಡೆದುರುಳಿಸುವಲ್ಲಿ ಸೇನಾಪಡೆಗಳು ಯಶಸ್ವಿಯಾಗಿದ್ದರು,ಇದರ ಪ್ರತಿದಾಳಿಯಲ್ಲಿ ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್ ಸೇರಿದಂತೆ ಇತರ ಮೂವರು ಸೈನಿಕರು ಹುತಾತ್ಮರಾಗಿದ್ದರು.
ಅವರ ಪರಾಕ್ರಮವನ್ನು ಗೌರವಿಸಿ ಭಾರತ ಸರ್ಕಾರ ಮರಣೋತ್ತರ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗಿತ್ತು.
“ನನ್ನ ಪತಿ ಸಂಚರಿಸಿದ್ದ ಹಾದಿಯಲ್ಲಿ ನಾನೂ ಸಂಚರಿಸಿದ್ದೇನೆ. ಯಾವತ್ತೂ ಅವರು ನನ್ನ ಜೀವನದ ಭಾಗವಾಗಿಯೇ ಇರಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಈ 11 ತಿಂಗಳಲ್ಲಿ ನಾನು ತುಂಬಾ ಕಲಿತುಕೊಂಡಿದ್ದೇನೆ. ನನ್ನ ಈ ಯಾತ್ರೆಯಲ್ಲಿ ಸಹಕರಿಸಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದು ನಿಕಿತಾ ಕೌಲ್ ಹೇಳಿದ್ದಾರೆ.
#WATCH | ….I've experienced same journey he has been through. I believe he's always going to be part of my life: Nitika Kaul, wife of Maj Vibhuti Shankar Dhoundiyal who lost his life in 2019 Pulwama attack, at passing out parade at Officers Training Academy in Chennai pic.twitter.com/7cLRlsp39c
— ANI (@ANI) May 29, 2021