ಉಜಿರೆ | ಕೇವಲ 15 ದಿನಗಳ ಅಂತರದಲ್ಲಿ ಒಂದೇ ಮನೆಯ ಮೂವರು ಕೊರೋನಾಗೆ ಬಲಿ
ಕೊರೋನಾವೆಂಬ ಕಣ್ಣಿಗೆ ಕಾಣದ ಮಹಾಮಾರಿ ಮಾಡಿದ ಅವಾಂತರ ಅಷ್ಟಿಷ್ಟಲ್ಲ. ಅದೆಷ್ಟೋ ಕುಟುಂಬಗಳು ಇಂದು ಗತಿ ಇಲ್ಲದೇ ಇದೆ. ಇದಕ್ಕೆಲ್ಲ ಕಾರಣ ಕೊರೋನವೈರಸ್. ಇಂತಹದೇ ಘಟನೆಯೊಂದು ಉಜಿರೆಯಲ್ಲಿ ನಡೆದಿದೆ.
ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸ್ತವ್ಯವಿರುವ ಒಂದೇ ಕುಟುಂಬದ ಮೂವರು ಸದಸ್ಯರು ಕೇವಲ 15 ದಿನಗಳ ಅಂತರದಲ್ಲಿ ಕೊರೋನಾದಿಂದ ಮೃತರಾಗಿದ್ದಾರೆ.
ಉಜಿರೆ ಗ್ರಾಮದ ಗಾಂಧಿನಗರ ನಿವಾಸಿ ಪುರಲ್ಲ(92), ಅವರ ಪುತ್ರಿ ಅಪ್ಪಿ(45) ಹಾಗೂ ಅಪ್ಪಿಯವರ ಪತಿ ಗುರುವ(52) ಕೋವಿಡ್ ಸೋಂಕಿನಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಉಜಿರೆ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ ಅವರ ತಂದೆ ಪುರಲ್ಲ ಕೋವಿಡ್ ಸೋಂಕಿಗೆ ಪಾಸಿಟಿವ್ ಆದವರು ಚಿಕಿತ್ಸೆ ಫಲಿಸದೆ ಮೇ13 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದಾದ ನಂತರ ಅವರ ಪುತ್ರಿ ಅಪ್ಪಿ ಮೇ 23 ರಂದು ಮೃತಪಟ್ಟಿದ್ದರೆ, ಅಪ್ಪಿಯ ಪತಿ ಗುರುವ (52) ಮೇ 27ರಂದು ಸೋಂಕಿಗೆ ಬಲಿಯಾಗಿದ್ದಾರೆ.
ಊಹಿಸಲಸಾಧ್ಯವಾದ ರೀತಿಯಲ್ಲಿ ನಮ್ಮ ಕುಟುಂಬದವರನ್ನು ಕಳೆದುಕೊಂಡು ಈಗ ಇವರು ದುಃಖದ ದಿನಗಳನ್ನು ಕಳೆಯುತ್ತಿದ್ದಾರೆ.