ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ | ಸಿಎಂ ಪುತ್ರರ ಹಸ್ತಕ್ಷೇಪ ಹಾಗೂ ಯೋಗೇಶ್ವರ ಹೇಳಿಕೆ ಬಗ್ಗೆ ವಿವರಣೆ ಪಡೆಯುತ್ತೇನೆ- ನಳಿನ್ ಕುಮಾರ್ ಕಟೀಲ್

ರಾಜ್ಯದಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಲ್ಲಗಳೆದಿದ್ದಾರೆ.ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ.ಈ ಕುರಿತು ಎಲ್ಲಿಯೂ ಚರ್ಚೆ ಆಗಿಲ್ಲ, ಯಾವುದೇ ಬದಲಾವಣೆ ಕೂಡ ಮಾಡಲ್ಲ. ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿಯಾದಗಿನಿಂದ ಬದಲಾವಣೆ ಬಗ್ಗೆ ಚರ್ಚೆ ಆರಂಭವಾಗಿದೆ.ಯಡಿಯೂರಪ್ಪ ಅವರೇ ನಮ್ಮ ನಾಯಕರು. ಮುಂದಿನ ಎರಡು ವರ್ಷ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ.ಅಧಿಕಾರವನ್ನು ಅವರೇ ಕೂಡ ಪೂರ್ಣಗೊಳಿಸಲಿದ್ದು, ಶಾಸಕಾಂಗ ಪಕ್ಷದ ಸಭೆ ಸದ್ಯಕ್ಕಿಲ್ಲ , ಕೋವಿಡ್ ಮುಗಿಯುವ ತನಕ ಯಾವುದೇ ಸಭೆಗಳನ್ನು ನಡೆಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದರು.

ಬೆಂಗಳೂರಿನ ಯಶವಂತಪುರದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರಿಗೆ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಯಡಿಯೂರಪ್ಪ ಅವರು 24ಗಂಟೆಗಳ ಕಾಲ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದಾರೆ. ಸಚಿವರ ತಂಡ ಕೂಡ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಜನರ ಜೊತೆ ಸರಕಾರವಿದೆ ಎಂದು ಭರವಸೆ ನೀಡುವುದಕ್ಕಾಗಿ ಯಡಿಯೂರಪ್ಪ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ಸಚಿವ ಸಿಪಿ ಯೋಗೇಶ್ವರ್ ಅವರ ರಾಜ್ಯದಲ್ಲಿ ಶುದ್ಧ ಸರ್ಕಾರ ಇಲ್ಲ ಎಂಬ ಅವರ ಹೇಳಿಕೆ ಬಗ್ಗೆ ಕೂಡಲೇ ವಿವರಣೆ ಪಡೆಯುತ್ತೇನೆ. ಸಿಎಂ ಪುತ್ರರಿಂದ ಅಧಿಕಾರ ಹಸ್ತಕ್ಷೇಪದ ಆರೋಪದ ಬಗ್ಗೆಯೂ ವಿವರಣೆ ಪಡೆಯುತ್ತೇನೆ ಎಂದರು.

ಕೋವಿಡ್ ಸಂಕಷ್ಟದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೆಲಸ ನಡೆಯುತ್ತಿದೆ. ಬೇರೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಶಾಸಕರಿಗೆ ಈ ಹಿಂದೆಯೇ ಸೂಚಿಸಲಾಗಿತ್ತು. ಈಗಲೂ ಅದೇ ಸೂಚನೆ ಕೊಡುತ್ತಿದ್ದೇನೆ.ಕೋವಿಡ್ ನಿಯಂತ್ರಣ ಬಿಟ್ಟು ಬೇರೆ ರಾಜಕೀಯ ಚಟುವಟಿಕೆ ಮಾಡಬಾರದು ಎಂದು ಇದೇ ವೇಳೆ ಭಿನ್ನಮತೀಯರಿಗೆ ಟಾಂಗ್ ನೀಡಿದರು.

Leave A Reply

Your email address will not be published.