ವಯಸ್ಸು ಮೂವತ್ತಾ ?? ಮದುವೆ ಬಗ್ಗೆ ಗೊಂದಲ ಇದೆಯೇ ?? ಹಾಗಾದರೆ ಇದನ್ನು ಒಮ್ಮೆ ಓದಿ

ವಯಸ್ಸು ಮೂವತ್ತು ದಾಟಿತಾ? ಸಂಬಂಧಿಕರು ಮದುವೆ ಮಾಡ್ಕೋ ಮಾರಾಯ್ತಿ ಅಂತ ಬೆನ್ನು ಬಿದ್ದಿದ್ದಾರಾ? ಇವಿಷ್ಟೇ ಕಾರಣಕ್ಕೆ ನೀವು ಮದುವೆ ಆಗೋ ನಿರ್ಧಾರಕ್ಕೆ ಬರುವುದು ಸರಿಯಲ್ಲ. ಮದುವೆ ಆಗುವುದಾದರೆ ಅದಕ್ಕೆ ಸರಿಯಾದ ಕಾರಣ
ಇರಲೇಬೇಕು. ಹಾಗಿದ್ದರೆ ನಾವು ಮದುವೆ ನಿರ್ಧಾರಕ್ಕೆ ಬರುವ ಹಿಂದಿನ ಕಾರಣಗಳು ಸರಿ ಇದೆಯೇ ಅಥವಾ ತಪ್ಪಾ ಎಂದು ಗೊತ್ತಾಗೋದು ಹೇಗೆ? ಇದಕ್ಕೆ ನಾವು ನಾಲ್ಕು ಕಾರಣಗಳನ್ನು ನೀಡುತ್ತಿದ್ದೇವೆ, ಮುಂದೆ ಓದಿ.

 

ಶ್ರೀಮಂತ ಎಂಬ ಕಾರಣಕ್ಕೆ: ನೀವು ಮದುವೆ ಆಗಲು ನಿರ್ಧರಿಸಿದ ಹುಡುಗ ಶ್ರೀಮಂತ ಆಗಿದ್ದರೆ ಒಳ್ಳೆಯದೇ. ಆರ್ಥಿಕವಾಗಿ ಸಬಲನಾಗಿರದ ವ್ಯಕ್ತಿಯನ್ನು ಮದುವೆ ಆಗುವುದು ಒಳ್ಳೆ ನಿರ್ಧಾರ ಖಂಡಿತ ಅಲ್ಲ. ಹಾಗೆಂದು ಹುಡುಗ ಶ್ರೀಮಂತ ಆಗಿದ್ದರೆ ಅಷ್ಟೇ ಸಾಕಾ? ಇಬ್ಬರ ನಡುವೆ
ಹೊಂದಾಣಿಕೆಯೂ ಇರಬೇಕಲ್ಲ? ಇದರ ಬಗ್ಗೆಯೂ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.

ಪೋಷಕರಿಗೆ ಇಷ್ಟ ಆಗಿದೆ : ನೋಡಿದ ಹುಡುಗನನ್ನು ಮದುವೆ ಆಗಬೇಕೋ, ಬೇಡವೋ ಎಂಬ ಗೊಂದಲ ನಿಮ್ಮನ್ನು ಕಾಡುತ್ತಿರುತ್ತದೆ. ಆದರೆ ಪೋಷಕರಿಗೆ ಆತ ಇಷ್ಟ ಆಗಿರುತ್ತಾನೆ. ಪೋಷಕರಿಗೆ ಇಷ್ಟ ಎಂಬ ಒಂದೇ ಕಾರಣಕ್ಕೆ ಮದುವೆ ನಿರ್ಧಾರಕ್ಕೆ ಬರಬೇಡಿ. ಯಾಕೆಂದರೆ ನಂತರ ಆ ವ್ಯಕ್ತಿ ಜೊತೆ ಜೀವನ ಮಾಡೋದು ನೀವೇ ಹೊರತು ನಿಮ್ಮ ಪೋಷಕರಲ್ಲ. ನಿಮಗೂ ಒಪ್ಪಿಗೆಯಾಗಬೇಕು, ಪೋಷಕರಿಗೂ ಇಷ್ಟ ಆಗುವಂತಿರಬೇಕು ನಿಮ್ಮ ಸಂಗಾತಿ.

ಪೋಷಕರ ಕಿರಿಕಿರಿಯಿಂದ ಸ್ವಾತಂತ್ರ್ಯ: ಪೋಷಕರ ನಿಯಮಗಳು, ಕೆಲವು ಕಿರಿಕಿರಗಳು, ಮನೆಯಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟವಾಗುವಾಗುತ್ತಿದ್ದಾಗ ಕೆಲವರು ಮದುವೆ ನಿರ್ಧಾರಕ್ಕೆ ಬರುವುದಿದೆ. ಈ ಕಾರಣಗಳಿಗೆ ನೀವು ಮದುವೆ ಆಗಲು ಯೋಚಿಸ್ತಿದ್ದೀರಿ ಎಂದಾದರೆ ಸ್ವಲ್ಪ ಯೋಚಿಸಿ, ಈ ಸಮಸ್ಯೆಗೆ ಮನೆಯಲ್ಲಿನ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸುವ ಅಥವಾ ನಿಮ್ಮದೇ ಆದ ಬೇರೆ ಮನೆ ಮಾಡುವಂತಹ ಅನ್ಯ ಮಾರ್ಗಗಳು ಇದೆ. ಅಷ್ಟಕ್ಕೂ ಮದುವೆ ಆದ ಮೇಲೆ ನೀವೀಗ ಅನುಭವಿಸುತ್ತಿರುವ ಕಿರಿಕಿರಿ ಇರವುದಿಲ್ಲ ಅಂತ
ಗ್ಯಾರಂಟಿಯೇನೂ ಇಲ್ಲವಲ್ಲ.

ಸಮಾಜದ ಒತ್ತಡ : ನಿಮ್ಮ ಸುತ್ತಮುತ್ತಲಿನವರು, ಗೆಳೆಯರು ಮದುವೆ ಆಗುತ್ತಿದ್ದಾರೆ ಹಾಗೂ ಪೋಷಕರೂ ಇನ್ನು ತಡ ಮಾಡಬೇಡ ಎಂದು ಹೇಳುತ್ತಿದ್ದಾಗ ಮದುವೆಯ ಬಗ್ಗೆ ಆಲೋಚನೆ ಬರುವುದು ಸಹಜ. ಆದರೆ ಮದುವೆಗೆ ಸರಿಯಾದ ಸಂಗಾತಿ ಮುಖ್ಯವೇ ಹೊರತು ಬೇರೆಯವರು ಏನು ಹೇಳುತ್ತಾರೆ ಎನ್ನುವುದಲ್ಲ. ಹಾಗಾಗಿ ಮದುವೆ ನಿರ್ಧಾರಕ್ಕೆ ಬರೋ ಮುನ್ನ ಯೋಚಿಸಿ ಹೆಜ್ಜೆ ಇಡಬೇಕು. ಹಾಗೆಯೇ ಸೂಕ್ತ ಸಂಗಾತಿ ಸಿಗುವವರೆಗೂ ಕಾಯಬೇಕು.

Leave A Reply

Your email address will not be published.