Tirupati: ತಿರುಪತಿಯಲ್ಲಿ ಕಾಲ್ತುಳಿತ- ಕರ್ನಾಟಕದ ಮಹಿಳೆ ಸಾವು!!

Tirupati: ತಿರುಪತಿಯಲ್ಲಿ ಭಕ್ತಾದಿಗಳ ನಡುವೆ ಕಾಳ್ತುಲಿತ ಉಂಟಾಗಿ 6 ಮಂದಿ ಭಕ್ತಾದಿಗಳು ಸ್ಥಳದಲ್ಲಿ ಮೃತಪಟ್ಟು, ಇಪ್ಪತ್ತಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ಗಾಯಗೊಂಡಿದ್ದಾರೆ. ಇನ್ನು ಈ ಆರು ಮಂದಿ ಸಾವನ್ನಪ್ಪಿದ ಭಕ್ತಾದಿಗಳಲ್ಲಿ ಕರ್ನಾಟಕದ ಓರ್ವ ಮಹಿಳಾ ಭಕ್ತಿಯು ಕೂಡ ಇದ್ದಾರೆ.
ಹೌದು, ತಿರುಪತಿಯ(Tirupati) ವಿಷ್ಣು ನಿವಾಸಂನಲ್ಲಿ ಈ ಕಾಲ್ತುಳಿತ ಉಂಟಾಗಿದೆ. ವಿಷ್ಣು ನಿವಾಸಂನಲ್ಲಿ ವೈಕುಂಠದ್ವಾರದ ಸರ್ವದರ್ಶನಂ ಟೋಕನ್ ವಿತರಣೆ ಮಾಡಲಾಗುತ್ತಿತ್ತು. ಈ ವೇಳೆ 4 ಸಾವಿರಕ್ಕೂ ಹೆಚ್ಚು ಭಕ್ತರು ಟಿಕೆಟ್‌ಗಾಗಿ ಮುಗಿಬಿದ್ದ ಕಾರಣ ಕಾಲ್ತುಳಿತ ಸಂಭವಿಸಿ 6 ಮಂದಿ ಸಾವನ್ನಪ್ಪಿದ್ದು ಭೀಕರ ಕಾಲ್ತುಳಿತದಲ್ಲಿ ಕರ್ನಾಟಕದ ಬಳ್ಳಾರಿ ಮೂಲದ ಮಹಿಳೆ ನಿರ್ಮಲಾ (50) ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಉಳಿದಂತೆ ಆಂಧ್ರಪ್ರದೇಶದ ನರಸೀಪಟ್ಟಣದ ಬಿ.ನಾಯ್ಡು ಬಾಬು (51), ರಜಿನಿ (47), ಲಾವಣ್ಯ (40), ವಿಶಾಖಪಟ್ಟಣದ ಶಾಂತಿ (34) ಮತ್ತು ತಮಿಳುನಾಡಿನ ಸೇಲಂ ಪ್ರದೇಶದ ಮಲ್ಲಿಗಾ (49) ಶವವಾಗಿ ಪತ್ತೆಯಾಗಿದ್ದಾರೆ. ಇನ್ನು ಕಾಲ್ತುಳಿತಕ್ಕೆ ಸಿಕ್ಕು ಘಟನೆಯಲ್ಲಿ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿ ತಿರುಮಲ ತಿರುಪತಿ ದೇವಸ್ಥಾನದ ಮಂಡಳಿಯ ಅಧ್ಯಕ್ಷ ಬಿಆರ್ ನಾಯ್ಡು ತುರ್ತು ಸಭೆಯನ್ನು ಕರೆದಿದ್ದಾರೆ.
Comments are closed.