ಆಕ್ಸಿಜನ್ ಪೈಪ್ ಅಳವಡಿಸಿಕೊಂಡೇ ಕೆಲಸಕ್ಕೆ ಬಂದ ಬ್ಯಾಂಕ್ ಸಿಬ್ಬಂದಿ..! | ಲಾಕ್ ಡೌನ್ ನಲ್ಲಿ ನಡೆದ ವಿಚಿತ್ರ ಘಟನೆ
ರಾಂಚಿ: ಕೊರೋನಾ ಸೋಂಕು ಮೂಲೆ ಮೂಲೆಗೂ ಹಬ್ಬಿದ್ದು, ಯಾರನ್ನು ಬಿಟ್ಟಿಲ್ಲ. ಈ ನಡುವೆ ಹಲವಾರು ಬ್ಯಾಂಕ್ ಸಿಬ್ಬಂದಿಗಳೂ ಸಹ ಸೋಂಕಿಗೆ ಒಳಗಾಗಿದ್ದಾರೆ.
ಜಾರ್ಖಂಡ್ ನಲ್ಲಿ ಬ್ಯಾಂಕ್ ಸಿಬ್ಬಂದಿಯೊಬ್ಬ ಆಕ್ಸಿಜನ್ ಪೈಪ್ ಸಿಲುಕಿಸಿಕೊಂಡೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇದಕ್ಕೆ ಕಾರಣವೇನೆಂದು ಕೇಳಿದರೆ ಬ್ಯಾಂಕ್ ನನಗೆ ರಜೆ ನೀಡಿಲ್ಲ ಎಂದು ಹೇಳಿದ್ದಾರೆ.
ಘಟನಾ ವಿವರ:
ಬ್ಯಾಂಕ್ ಸಿಬ್ಬಂದಿಯೊಬ್ಬರು ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಬಳಿಕ ಸೋಂಕಿನಿಂದ ಗುಣಮುಖರಾಗಿದ್ದರು. ಆದರೆ ಸ್ವಲ್ಪ ಉಸಿರಾಟದ ಸಮಸ್ಯೆ ಇದ್ದ ಕಾರಣ ಆಕ್ಸಿಜನ್ ಪೂರೈಕೆ ಬೆಂಬಲ ಪಡೆದಿದ್ದರು
ಹೀಗಿರುವಾಗ ಮರಳಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಬ್ಯಾಂಕ್ ಸೂಚಿಸಿತ್ತು.ನನ್ನ ಆರೋಗ್ಯ ಸುಧಾರಿಸಿಲ್ಲ. ರಜೆ ನೀಡಿ ಎಂದು ಕೇಳಿದ್ದೆ. ಬ್ಯಾಂಕ್ ನಿರಾಕರಿಸಿತ್ತು. ಕೊನೆಗೆ ವಿಧಿಯಿಲ್ಲದೆ ಆಕ್ಸಿಜನ್ ಪೈಪ್ ಸಮೇತ ಬ್ಯಾಂಕ್ ಗೆ ಬಂದೆ ಎಂದು ಸಿಬ್ಬಂದಿ ಹೇಳಿದ್ದಾರೆ.
ಇಧೇ ವೇಳೆ ಈ ಆರೋಪವನ್ನು ಪಿಎನ್ ಬಿ ಬ್ಯಾಂಕ್ ತಳ್ಳಿಹಾಕಿದೆ. ರಜೆ ಪಡೆಯಲು ಮನವಿ ಮಾಡಿರಲಿಲ್ಲ. ಸಿಬ್ಬಂದಿ ನಾಟಕವಾಡುತ್ತಿದ್ದಾನೆ. ಬ್ಯಾಂಕ್ ನ ಹೆಸರು ಹಾಳು ಮಾಡಲು ಯತ್ನಿಸುತ್ತಿದ್ದಾನೆ ಎಂದು ತಿರುಗೇಟು ನೀಡಿದೆ.
ಈತನ ಹಾಗೂ ಬ್ಯಾಂಕಿನ ವಾದ ವಿವಾದಗಳ ನಡುವೆ ಒಂದು ಕ್ಷಣ ಗ್ರಾಹಕರು ಈತನನ್ನು ನೋಡಿ ಅಚ್ಚರಿಗೊಳಗಾಗಿದ್ದು ಖಂಡಿತವಾಗಿಯೂ ನಿಜ.