ನೀಲಿ ಬಣ್ಣಕ್ಕೆ ತಿರುಗಿದ ಗಂಗಾ ನದಿ..! | ವಿಷಮಯವಾಯ್ತಾ ಪವಿತ್ರ ನದಿಯ ನೀರು..?

ಲಕ್ನೋ: ಗಂಗಾನದಿಯನ್ನು ತ್ಯಾಜ್ಯ ಮುಕ್ತವಾಗಿಸುವ ಹಾಗೂ ಶುದ್ಧಗೊಳಿಸುವ ಕನಸನ್ನು ಕೇಂದ್ರ ಸರಕಾರ ಕಾಣುತ್ತಿದೆ. ಇದಕ್ಕೆ ಪೂರಕವೆಂಬಂತೆ ಕಳೆದ ವರ್ಷ ಎಪ್ರಿಲ್-ಮೇ ತಿಂಗಳಿನಲ್ಲಿ ದೇಶವ್ಯಾಪಿ ಲಾಕ್ಡೌನ್ ಘೋಷಣೆಯಾದ ಸಂದರ್ಭ ಉತ್ತರಪ್ರದೇಶದ ವಾರಣಾಸಿಯಲ್ಲಿ ಹರಿಯುವ ಗಂಗಾನದಿ ನೀರಿಗೆ ಹರಿದು ಬರುವ ಮಲಿನ, ತ್ಯಾಜ್ಯಗಳು ಕಡಿಮೆಯಾಗಿ ನೀರು ತಾನಾಗಿಯೇ ಶುದ್ಧಗೊಂಡಿತ್ತು. ಈ ಬಾರಿ ಸೋಂಕಿನ 2ನೇ ಅಲೆಯ ಸಂದರ್ಭದಲ್ಲೂ ಗಂಗಾನದಿಯ ನೀರು ನೀಲಿ ಬಣ್ಣದಲ್ಲಿ ಕಂಗೊಳಿಸುತ್ತಿದೆ. ಆದರೆ ನೀರಿನ ಬಣ್ಣ ಬದಲಾಗಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.

ನೀರು ವಿಷಯುಕ್ತಗೊಂಡಿರುವ ಸಾಧ್ಯತೆಯಿದೆ. ನೀಲಿ ಬಣ್ಣ ದೀರ್ಘಾವಧಿಯವರೆಗೆ ಉಳಿದುಕೊಳ್ಳುತ್ತದೆಯೇ ಎಂಬುದನ್ನು ಗಮನಿಸುವ ಅಗತ್ಯವಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಗಂಗಾ ನದಿಯ 84 ಕಾಂಕ್ರೀಟ್ ತೀರಗಳಲ್ಲಷ್ಟೇ ಅಲ್ಲ, ಇತರ ಸ್ಥಳಗಳಲ್ಲೂ ನದಿ ನೀರು ನೀಲಿ ಬಣ್ಣಕ್ಕೆ ತಿರುಗಿರುವುದು ಗೋಚರವಾಗುತ್ತಿದೆ. ಆದ್ದರಿಂದ ಕಾರಣವೇನು ಎಂಬುದು ನಿರ್ದಿಷ್ಟವಾಗಿ ತಿಳಿದುಬಂದಿಲ್ಲ.

Leave A Reply

Your email address will not be published.