Liquid Nitrogen Paan: ಮದುವೆ ಸಮಾರಂಭದಲ್ಲಿ ಲಿಕ್ವಿಡ್ ನೈಟ್ರೋಜನ್ ಪಾನ್ ತಿಂದು 12 ವರ್ಷದ ಹುಡುಗಿಯ ಹೊಟ್ಟೆಯಲ್ಲಿ ರಂಧ್ರ
Liquid Nitrogen Paan: 12 ವರ್ಷದ ಬಾಲಕಿಯೊಬ್ಬಳು ಬೆಂಗಳೂರಿನಲ್ಲಿ ನಡೆದ ಆರತಕ್ಷತೆ ಮದುವೆಯಲ್ಲಿ ಲಿಕ್ವಿಡ್ ನೈಟ್ರೋಜನ್ ತುಂಬಿದ ಪಾನ್ ಸೇವಿಸಿದ್ದು ನಂತರ ಆಸ್ಪತ್ರೆಗೆ ದಾಖಲಾಗಿರುವ ಘಟನೆಯೊಂದು ನಡೆದಿತ್ತು. ಈ ಘಟನೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದಿದೆ. ಇದೀಗ ಬಾಲಕಿಯ ಹೊಟ್ಟೆಯಲ್ಲಿ ರಂಧ್ರವಾಗಿರುವುದು ಗಮನಕ್ಕೆ ಬಂದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: Viral News: ಮೇಲಿಂದ ಬಿದ್ದ ಮಗುವನ್ನು ರಕ್ಷಣೆ ಮಾಡಿದ ವಾರಗಳ ನಂತರ ಇದೀಗ ತಾಯಿ ಸುಸೈಡ್; ಕಾರಣವೇನು?
ಬಾಯಲ್ಲಿ ಪಾನ್ ಹಾಕಿದ ಕೂಡಲೇ ಹೊಗೆ ಬರುವ ಈ ಟ್ರೆಂಡ್ ಇತ್ತೀಚೆಗೆ ಎಲ್ಲಾ ಕಡೆ ವೈರಲ್ ಆಗಿದೆ. ಆದರೆ ಈ ಟ್ರೆಂಡಿ ಫುಡ್‌ಗಳ ಹಿಂದೆ ಅಡಗಿರುವ ಅಪಾಯದ ಕುರಿತು ಯಾರಿಗೂ ಅರಿವಿಲ್ಲ.
ಇದನ್ನೂ ಓದಿ: Actor Chetan Kumar Ahimsa: ಸಿಎಂ ಸಿದ್ದರಾಮಯ್ಯ “ಸೋಮಾರಿ” ಎಂದ ಕನ್ನಡ ನಟ!
ಬಾಲಕಿಯನ್ನು ಇಂಟ್ರಾಆಪರೇಟಿವ್ OGD ಸ್ಕೋಪಿಯೊಂದಿಗೆ ಪರಿಶೋಧನಾತ್ಮಕ ಲ್ಯಾಪರೊಟಮಿಗೆ ಒಳಪಡಿಸಲಾಯಿತು. ಅಲ್ಲಿ ಬಾಲಕಿಗೆ ಅನ್ನನಾಳ, ಹೊಟ್ಟೆ ಮತ್ತು ಡ್ಯುವೋಡೆನಮ್ ಅನ್ನು ಪರೀಕ್ಷೆಗೆಂದು ಎಂಡೋಸ್ಕೋಪ್ ಮಾಡಲಾಯಿತು. ಅಲ್ಲಿ 4×5 ಸೆಂ.ಮೀ ಅಳತೆಯ ಅನಾರೋಗ್ಯಕರ ಪ್ಯಾಚ್ ಕಂಡು ಬಂದಿದೆ.
ಅನಂತರ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಹೊಟ್ಟೆಯ ಒಂದು ಭಾಗವನ್ನು ತೆಗೆದು ಹಾಕಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆರು ದಿನಗಳ ಬಳಿಕ ಬಾಲಕಿ ಮನೆಗೆ ಮರಳಿದ್ದಾಳೆ.
[…] ಇದನ್ನೂ ಓದಿ: Liquid Nitrogen Paan: ಮದುವೆ ಸಮಾರಂಭದಲ್ಲಿ ಲಿಕ್ವಿಡ್ … […]
[…] ಇದನ್ನೂ ಓದಿ: Liquid Nitrogen Paan: ಮದುವೆ ಸಮಾರಂಭದಲ್ಲಿ ಲಿಕ್ವಿಡ್ … […]