ಬಾಗಲಕೋಟೆ | ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ನೀಡುವ ಆಹಾರ ಧಾನ್ಯಗಳ ಕಳ್ಳಸಾಗಾಣಿಕೆ, ಸಿಡಿದೆದ್ದ ಗ್ರಾಮಸ್ಥರು

ಗರ್ಭಿಣಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ನೀಡುವ ಆಹಾರ ಧಾನ್ಯವನ್ನು ಸರಿಯಾಗಿ ವಿತರಣೆ ಮಾಡದೆ, ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಹುನಗುಂದ ತಾಲೂಕಿನ ಕರಡಿ ಗ್ರಾಮಸ್ಥರು, ಅಂಗನವಾಡಿ ಕೇಂದ್ರದ ಮಹಿಳಾ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.


  
ಲಾಕ್ ಡೌನ್ ನೆಪದಲ್ಲಿ ಕಳೆದ ಎರಡು ತಿಂಗಳಿನಿಂದ ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ನೀಡಬೇಕಾದ ಪೌಷ್ಟಿಕ ಆಹಾರ ಧಾನ್ಯ ವಿತರಣೆ ಮಾಡಿಲ್ಲ, ಕೆಲವೊಂದು ಸಾಮಾಗ್ರಿಗಳನ್ನು ತಮ್ಮ ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು ಎರಡು ತಿಂಗಳಿನಿಂದ ಕೆಲವು ಆಹಾರ ಸಾಮಗ್ರಿಗಳು ಹುಳು ಬಿದ್ದು ಹಾಳಾಗಿವೆ. ಇನ್ನು ಬಹಳಷ್ಟು ಮೊಟ್ಟೆಗಳ ಸಂಗ್ರಹ ಇದ್ದರೂ ವಿತರಣೆ ಮಾಡಿಲ್ಲ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಈ ರೀತಿಯ ಕಳ್ಳಸಾಗಾಣಿಕೆಯ  ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಅಂಗನವಾಡಿ ಕಾರ್ಯಕರ್ತೆ ಪುಷ್ಪಾ ಪಾದನಕಟ್ಟಿ  ಎಂಬುವವರು ಕೊರೊನಾ ಹಿನ್ನೆಲೆಯಲ್ಲಿ ಮನೆಗೆ ಆಹಾರ ಸಾಮಗ್ರಿಗಳ ವಿತರಣೆ ಮಾಡುತ್ತಿಲ್ಲ, ಸಂಗ್ರಹವಾಗಿದ್ದ ಉತ್ತಮ ಗುಣಮಟ್ಟದ ಆಹಾರ ಧಾನ್ಯ ವಿತರಣೆ ಈಗಾಗಲೇ ಮಾಡಲಾಗಿದೆ.ರಾತ್ರಿ ಅಂಗನವಾಡಿ ತೆರೆದಿರದಿದ್ದರೂ,ಲಾರಿ ಮೂಲಕ ಬಂದ ಆಹಾರ ಸಾಮಗ್ರಿ ಇಳಿಸುವ ಕಾರ್ಯ ನಡೆದಿತ್ತು ಎಂದು ಸಮಾಜಾಯಿಸಿ ಹೇಳಿಕೆ ನೀಡಿದ್ದಾರೆ.

4 Comments
  1. ecommerce says

    Wow, fantastic weblog format! How lengthy have you been blogging for?
    you make running a blog glance easy. The whole glance of your web site is wonderful, let
    alone the content! You can see similar here sklep online

  2. Franklyn says

    Hello! Do you know if they make any plugins to help with Search
    Engine Optimization? I’m trying to get my site to rank for some targeted keywords but I’m not seeing very
    good success. If you know of any please share. Appreciate it!
    I saw similar text here: Scrapebox AA List

  3. download tiktok video says

    Hello! I just wish to give you a huge thumbs up for the great info you have got right here on this post. I will be returning to your web site for more soon.

  4. youtube mp3 converter says

    It’s hard to find knowledgeable people about this subject, however, you sound like you know what you’re talking about! Thanks

Leave A Reply

Your email address will not be published.