ಹೊಸ ಲುಕ್ ನಲ್ಲಿ ಮಿಂಚುತ್ತಿರುವ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಈ ಹೆಸರು ಕೇಳಿದರೆ ಸಾಕು ಕ್ರಿಕೆಟ್ ಪ್ರೇಮಿಗಳು ರೋಮಾಂಚನಗೊಳ್ಳುತ್ತಾರೆ. ಅವರು ಕ್ರೀಸ್ ಗೆ ಇಳಿದರೆ ಅಭಿಮಾನಿಗಳ ಸಂತಸ, ಕರತಾಡನ ಹೇಳಬೇಕಾಗಿಲ್ಲ.ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಲ್ಲಾ ಪಂದ್ಯಗಳಲ್ಲೂ ಭರ್ಜರಿ ರನ್‌ದಾಹದೊಂದಿಗೆ ಬ್ಯಾಟ್ ಬೀಸುತ್ತಾರೆ.

ಆದರೆ ಐಪಿಎಲ್ 14ನೇ ಆವೃತ್ತಿ ಅರ್ಧಕ್ಕೆ ಸ್ಥಗಿತಗೊಂಡ ಬಳಿಕ ಸರಿಸುಮಾರು ಒಂದು ತಿಂಗಳಿನಿಂದ ವಿರಾಟ್ ಕೊಹ್ಲಿ ಕೂಡ ಮನೆಯಲ್ಲೇ ಲಾಕ್ ಆಗಿದ್ದಾರೆ. ಈ ಅವಧಿಯಲ್ಲಿ ವಿರಾಟ್ ಕೊಹ್ಲಿ ಅವರ ಲುಕ್ ಕೂಡ ಸಾಕಷ್ಟು ಬದಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ.

32 ವರ್ಷದ ವಿರಾಟ್ ಕೊಹ್ಲಿ ಮೊದಲೇ ಗಡ್ಡಧಾರಿಯಾಗಿದ್ದರು. ಇದೀಗ ಲಾಕ್ ಡೌನ್ ಅವಧಿಯಲ್ಲಿ ಅವರ ಕೂದಲು ಮತ್ತು ಗಡ್ಡ ಸಾಕಷ್ಟು ಉದ್ದವಾಗಿ ಬೆಳೆದಿದ್ದು, ಜೊತೆಗೆ ಅವರ ದೊಡ್ಡದಾದ ಕನ್ನಡಕ ಅವರ ಲುಕ್‌ಅನ್ನು ಸಂಪೂರ್ಣ ಭಿನ್ನಗೊಳಿಸಿದೆ. ನೆಟ್ಟಿಗರು ಅವರ ಹೊಸ ಲುಕ್‌ಅನ್ನು ವಿವಿಧ ವ್ಯಕ್ತಿಗಳಿಗೆ, ಸಿನಿಮಾ-ವೆಬ್ ಸಿರೀಸ್ ಪಾತ್ರಧಾರಿಗಳಿಗೆ ಹೋಲಿಸುವ ಮೂಲಕ ಭಾರಿ ಚರ್ಚೆಯಲ್ಲಿ ತೊಡಗಿದ್ದಾರೆ. ಈ ಮೂಲಕ ಕೊಹ್ಲಿಯ ಹೊಸ ಲುಕ್‌ಅನ್ನು ಟ್ರೋಲ್ ಮಾಡುತ್ತಿದ್ದಾರೆ.

ಜನಪ್ರಿಯ ಇಂಗ್ಲಿಷ್ ವೆಬ್ ಸಿರೀಸ್ ‘ಮನಿ ಹೀಸ್ಟ್’ನ ಪ್ರೊಫೆಸರ್ ಪಾತ್ರಧಾರಿಯೊಂದಿಗೆ ವಿರಾಟ್ ಕೊಹ್ಲಿಯ ಹೊಸ ಲುಕ್ ಸಾಕಷ್ಟು ಹೋಲುತ್ತಿದೆ ಎಂದು ಹೆಚ್ಚಿನ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಈ ಸರಣಿಯ ಭಾರತೀಯ ಆವೃತ್ತಿಗೆ ಕೊಹ್ಲಿ ಹೊಂದಿಕೆಯಾಗಬಹುದು ಎಂದೂ ಕೆಲವರು ಕಾಲೆಳೆದಿದ್ದಾರೆ.

ಹೀಗೆ ಹೊಸ ಲುಕ್ ನಲ್ಲಿ ಮಿಂಚುತ್ತಿರುವ ಕೊಹ್ಲಿ, ಹಲವು ಟ್ರೋಲ್ ಪೇಜ್ ಗಳಿಗೆ ರಸದೌತಣ ನೀಡಿದ್ದಾರೆ. ಸೆಲೆಬ್ರಿಟಿಗಳ ಈ ರೀತಿಯ ಹೊಸ ಲುಕ್ ಗಳು ಅವರ ಅಭಿಮಾನಿಗಳ ಲುಕ್ ಅನ್ನು ಕೂಡ ಬದಲಾಯಿಸಬಲ್ಲದು.

Leave A Reply

Your email address will not be published.