ನಾಳೆಯಿಂದ ಭಾರತದಲ್ಲಿ ಬಂದ್ ಆಗಲಿದೆಯಾ ವಾಟ್ಸ್ಆ್ಯಪ್, ಫೇಸ್ಬುಕ್, ಟ್ವಿಟರ್…?
ವಾಟ್ಸ್ಆ್ಯಪ್, ಫೇಸ್ಬುಕ್, ಟ್ವಿಟರ್ ನಾಳೆಯಿಂದ ಭಾರತದಲ್ಲಿ ಇರಲಿದೆಯೇ ಎಂಬ ಕುತೂಹಲ ಎಲ್ಲರಲ್ಲೀ ಉಂಟಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅದಾಗಲೇ ಕುತೂಹಲ ಕೆರಳಿದ್ದು, ಭಾರತದಲ್ಲಿ ನಾಳೆಯಿಂದ ಇವೆಲ್ಲ ಕಾರ್ಯನಿರ್ವಹಿಸಲಿವೆಯೇ ಇಲ್ಲವೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.
ಬಹುರಾಷ್ಟ್ರೀಯ ಕಂಪನಿಗಳಿಗೆ ಸೇರಿದ ಈ ಸೋಷಿಯಲ್ ಮೀಡಿಯಾ ಹಾಗೂ ಮೆಸೆಜಿಂಗ್ ಆ್ಯಪ್ಗಳು ಭಾರತದಲ್ಲಿ ಕಾರ್ಯನಿರ್ವಹಿಸಲು ಇರುವ ಹೊಸ ಮಧ್ಯಸ್ಥಿಕೆಯ ಮಾರ್ಗಸೂಚಿಗಳನ್ನು ಪಾಲಿಸಲು ನೀಡಿದ್ದ ಗಡುವು ಇಂದಿಗೆ ಮುಗಿಯಲಿದ್ದು, ಅವುಗಳ ಪಾಲನೆ ಸಂಬಂಧ ಈ ಕಂಪನಿಗಳಿಂದ ಯಾವುದೇ ಕ್ರಮ ಜರುಗಿಲ್ಲ.
ಭಾರತದ ಮಿನಿಸ್ಟ್ರಿ ಆರ್ಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಫಾರ್ಮೇಷನ್ ಟೆಕ್ನಾಲಜಿಯು ಹೊಸ ಐಟಿ ನಿಯಮಗಳನ್ನು ಜಾರಿ ಮಾಡಿದ್ದು, ಅವುಗಳ ಪಾಲನೆಗಾಗಿ ಮೂರು ತಿಂಗಳ ಕಾಲಾವಕಾಶ ನೀಡಿ ಫೆಬ್ರವರಿಯಲ್ಲೇ ಸೂಚನೆ ನೀಡಿತ್ತು.
ಕಾಲಾವಕಾಶ ಇಂದಿಗೆ ಮುಗಿಯಲಿದ್ದು, ಆ ಕುರಿತು ಕಂಪನಿಗಳಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಒಂದು ವೇಳೆ ಕಂಪನಿಗಳು ಈ ಮಾರ್ಗಸೂಚಿಗಳ ಪಾಲನೆಗೆ ಕ್ರಮಕೈಗೊಳ್ಳದಿದ್ದರೆ ಭಾರತದಲ್ಲಿ ಇವುಗಳ ಕಾರ್ಯಾಚರಣೆ ನಾಳೆಯಿಂದ ನಿಷೇಧಿಸಲಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಭಾರತದಲ್ಲಿ ಟ್ವಿಟರ್ಗೆ ಪರ್ಯಾಯವಾಗಿ ಹುಟ್ಟಿಕೊಂಡಿರುವ ಸ್ವದೇಶಿ ಆ್ಯಪ್ ಕೂ (Koo) ಈ ಮಾರ್ಗಸೂಚಿಗಳನ್ನು ಈಗಾಗಲೇ ಪಾಲಿಸುತ್ತಿದೆ. ಟ್ವಿಟರ್ ಸ್ಥಗಿತಗೊಂಡರೆ ನಾಳೆ ‘ಕೂ’ ಆ್ಯಪ್ ಭಾರಿ ಪ್ರಮಾಣದಲ್ಲಿ ಡೌನ್ಲೋಡ್ ಆಗುವ ಸಾಧ್ಯತೆಗಳಿವೆ ಎನ್ನಲಾಗಿದೆ.