ನಾಳೆಯಿಂದ ಭಾರತದಲ್ಲಿ ಬಂದ್ ಆಗಲಿದೆಯಾ ವಾಟ್ಸ್​ಆ್ಯಪ್​, ಫೇಸ್​ಬುಕ್​, ಟ್ವಿಟರ್…?​

ವಾಟ್ಸ್​ಆ್ಯಪ್​, ಫೇಸ್​ಬುಕ್​, ಟ್ವಿಟರ್​ ನಾಳೆಯಿಂದ ಭಾರತದಲ್ಲಿ ಇರಲಿದೆಯೇ ಎಂಬ ಕುತೂಹಲ ಎಲ್ಲರಲ್ಲೀ ಉಂಟಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅದಾಗಲೇ ಕುತೂಹಲ ಕೆರಳಿದ್ದು, ಭಾರತದಲ್ಲಿ ನಾಳೆಯಿಂದ ಇವೆಲ್ಲ ಕಾರ್ಯನಿರ್ವಹಿಸಲಿವೆಯೇ ಇಲ್ಲವೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

ಬಹುರಾಷ್ಟ್ರೀಯ ಕಂಪನಿಗಳಿಗೆ ಸೇರಿದ ಈ ಸೋಷಿಯಲ್ ಮೀಡಿಯಾ ಹಾಗೂ ಮೆಸೆಜಿಂಗ್ ಆ್ಯಪ್​ಗಳು ಭಾರತದಲ್ಲಿ ಕಾರ್ಯನಿರ್ವಹಿಸಲು ಇರುವ ಹೊಸ ಮಧ್ಯಸ್ಥಿಕೆಯ ಮಾರ್ಗಸೂಚಿಗಳನ್ನು ಪಾಲಿಸಲು ನೀಡಿದ್ದ ಗಡುವು ಇಂದಿಗೆ ಮುಗಿಯಲಿದ್ದು, ಅವುಗಳ ಪಾಲನೆ ಸಂಬಂಧ ಈ ಕಂಪನಿಗಳಿಂದ ಯಾವುದೇ ಕ್ರಮ ಜರುಗಿಲ್ಲ.

ಭಾರತದ ಮಿನಿಸ್ಟ್ರಿ ಆರ್ಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್​ ಇನ್​ಫಾರ್ಮೇಷನ್​ ಟೆಕ್ನಾಲಜಿಯು ಹೊಸ ಐಟಿ ನಿಯಮಗಳನ್ನು ಜಾರಿ ಮಾಡಿದ್ದು, ಅವುಗಳ ಪಾಲನೆಗಾಗಿ ಮೂರು ತಿಂಗಳ ಕಾಲಾವಕಾಶ ನೀಡಿ ಫೆಬ್ರವರಿಯಲ್ಲೇ ಸೂಚನೆ ನೀಡಿತ್ತು.

ಕಾಲಾವಕಾಶ ಇಂದಿಗೆ ಮುಗಿಯಲಿದ್ದು, ಆ ಕುರಿತು ಕಂಪನಿಗಳಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಒಂದು ವೇಳೆ ಕಂಪನಿಗಳು ಈ ಮಾರ್ಗಸೂಚಿಗಳ ಪಾಲನೆಗೆ ಕ್ರಮಕೈಗೊಳ್ಳದಿದ್ದರೆ ಭಾರತದಲ್ಲಿ ಇವುಗಳ ಕಾರ್ಯಾಚರಣೆ ನಾಳೆಯಿಂದ ನಿಷೇಧಿಸಲಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಭಾರತದಲ್ಲಿ ಟ್ವಿಟರ್​ಗೆ ಪರ್ಯಾಯವಾಗಿ ಹುಟ್ಟಿಕೊಂಡಿರುವ ಸ್ವದೇಶಿ ಆ್ಯಪ್​ ಕೂ (Koo) ಈ ಮಾರ್ಗಸೂಚಿಗಳನ್ನು ಈಗಾಗಲೇ ಪಾಲಿಸುತ್ತಿದೆ. ಟ್ವಿಟರ್ ಸ್ಥಗಿತಗೊಂಡರೆ ನಾಳೆ ‘ಕೂ’ ಆ್ಯಪ್ ಭಾರಿ ಪ್ರಮಾಣದಲ್ಲಿ ಡೌನ್​ಲೋಡ್ ಆಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

Leave A Reply

Your email address will not be published.