ಆನ್ಲೈನ್ ನಲ್ಲೇ ನಡೆಯಿತು ಪತ್ತನಾಜೆದ ಪತ್ತೆರಿ ಕೂಟ
ಜೈ ತುಳುನಾಡ್ (ರಿ) ಸಂಘಟನೆಯ ಕಾಸರಗೋಡು ಘಟಕದ ನೇತೃತ್ವದಲ್ಲಿ ಪತ್ತನಾಜೆದ ಪತ್ತೆರಿ ಕೂಟ ತುಳುನಾಡಿನ ಆಚಾರ ವಿಚಾರ ಲಿಪಿ ಸಂಸ್ಕ್ರತಿ ಮತ್ತು ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯುತ ಕೆಲಸ ಕಾರ್ಯಗಳನ್ನು ನಿಸ್ವಾರ್ಥವಾಗಿ ಯುವಕರು ಒಗ್ಗಟ್ಟಿನಿಂದ ನಡೆಸುತ್ತಿದೆ. ಜೊತೆಯಲ್ಲಿ ತುಳುನಾಡಿನಲ್ಲಿ ಅಳಿದು ಹೋಗುತ್ತಿರುವ ಹಬ್ಬ ಹರಿದಿನಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಪ್ರಯತ್ನವನ್ನೂ ಸಾರ್ವಜನಿಕವಾಗಿ ಮಾಡುತ್ತಾ ಬರುತ್ತಿದೆ.
ಅದೇ ರೀತಿಯಾಗಿ ತುಳುನಾಡಿನ ವಿಷೇಶ ದಿನಗಳಲ್ಲಿ ಒಂದಾಗಿರುವ ಪತ್ತನಾಜೆಯನ್ನು ಸಹ ತುಳುನಾಡಿನ ಗಣ್ಯಾದಿ ಗಣ್ಯರ ಸಮ್ಮುಖದಲ್ಲಿ ಲಾಕ್ಡೌನ್ ಮಧ್ಯೆಯೂ ಹೊರ ವೇದಿಕೆಯ ಅಸಾಧ್ಯದ ಸಂಧರ್ಭದಲ್ಲಿ ವಿಷೇಶವಾಗಿ ಗೂಗಲ್ ಮೀಟ್ ಎಂಬ ಆನ್ಲೈನ್ ವೇದಿಕೆಯಲ್ಲಿ ಬಹಳ ಅದ್ಧೂರಿಯಾಗಿ ಪತ್ತನಾಜೆದ ಪತ್ತೆರಿ ಕೂಟವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಹರಿಕಾಂತ್ ಕಾಸರಗೋಡು ವಹಿಸಿದ್ದರು. ಹಿರಿಯ ಪತ್ರಕರ್ತರು, ಸಹಕಾರಿ ಧುರೀಣರು ಹಾಗು ತುಳು ಸಾಹಿಗಳೂ ಆಗಿರುವ ಪಿ.ಬಿ ಶೆಣೈ ರವರು ಪತ್ತನಾಜೆಯ ಬಗ್ಗೆ ಮಾಹಿತಿ ನೀಡಿದರು. ಘಟಕದ ಗೌರವಾಧ್ಯಕ್ಷ ಉಮೇಶ್ ಸಾಲಿಯಾನ್, ಘಟಕದ ಜೊತೆಕಾರ್ಯದರ್ಶಿ,ತುಳು ಸಾಹಿತಿ ಶ್ರೀನಿವಾಸ ಆಳ್ವ ಕಳತ್ತೂರು, ವಿಕಿಪೀಡಿಯ ಸಂಪಾದಕಿ ಹಾಗೂ ಘಟಕದ ಉಪಾಧ್ಯಕ್ಷೆ ವಿನೋದ ಪ್ರಸಾದ್ ರೈ ಕಾರಿಂಜೆ ಹಾಗು ತುಳು ಸಾಹಿತಿ, ಘಟಕದ ಸದಸ್ಯೆ ರಾಜಶ್ರೀ ಟಿ ರೈ ಪೆರ್ಲ ಕಾರ್ಯಕ್ರದಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಪತ್ತನಾಜೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.
ದೇಶ ವಿದೇಶಗಳಿಂದ ಆನ್ಲೈನ್ ಮೂಲಕ ಭಾಗವಹಿಸಿದ ಗಣ್ಯರು ಇಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ಒಳ್ಳೆಯ ರೀತಿಯಲ್ಲಿ ಮಾಡುವಂತೆ ಸಂಘಟನೆಗೆ ಪ್ರೇರೇಪಿಸುವ ಮೂಲಕ ಶುಭ ಹಾರೈಸಿದರು. ಸಂಜೆ 5 ಗಂಟೆಗೆ ಪ್ರಾರಂಭಗೊಂಡ ಕಾರ್ಯಕ್ರಮವು 7 ಗಂಟೆಯ ತನಕ ಬಹುಸಂಖ್ಯೆಯ ತುಳು ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಮುಂದುವರಿಯಿತು.
ಕಾರ್ಯಕ್ರಮವನ್ನು ಘಟಕದ ಕಾರ್ಯದರ್ಶಿ ಕಾರ್ತಿಕ್ ಪೆರ್ಲ ನಿರೂಪಿಸಿದರು ಹಾಗೂ ಸದಸ್ಯೆ ಕುಶಾಲಾಕ್ಷಿ ವಿ ಕುಲಾಲ್ ಕಣ್ವತೀರ್ಥ ವಂದಿಸಿದರು.