ಪುಸ್ತಕದಲ್ಲಿ 70 ಜನರ ನೋಂದಣಿ,300 ಊಟ ಪಾರ್ಸಲ್ !! ಶಾಸಕ ಸಂಜೀವ ಮಠಂದೂರಿಂದ ಪರಿಶೀಲನೆ
ಪುತ್ತೂರು: ಸರಕಾರದ ಮಾರ್ಗಸೂಚಿಯಂತೆ ಲಾಕ್ಡೌನ್ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಮತ್ತು ಸಂಕಷ್ಟದಲ್ಲಿರುವವರಿಗೆ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಊಟದ ವ್ಯವಸ್ಥೆಯನ್ನು ಪಾರ್ಸೆಲ್ ರೂಪದಲ್ಲಿ ಕೊಡುತ್ತಿರುವ ಹಿನ್ನೆಲೆಯಲ್ಲಿ ದಿನವೊಂದಕ್ಕೆ ಸುಮಾರು 300 ಊಟ ಪಾರ್ಸೆಲ್ ಕುರಿತು ಮಾಹಿತಿ ಪಡೆದುಕೊಂಡ ಶಾಸಕರು ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕರು ಇಂದಿರಾ ಕ್ಯಾಂಟೀನ್ನ ದಾಖಲೆ ಪುಸ್ತಕ ಪರಿಶೀಲಿಸಿದಾಗ ಕ್ಯಾಂಟೀನ್ಗೆ ಬಂದವರ ಸಂಖ್ಯೆ 70 ಅದರೂ ಏಕ ವ್ಯಕ್ತಿಗಳ ಹೆಸರಿನಲ್ಲಿ 8ಕ್ಕಿಂತ ಅಧಿಕ ಪಾರ್ಸೆಲ್ ಇರುವುದನ್ನು ಗಮನಿಸಿ ಈ ಕುರಿತು ಪರಿಶೀಲನೆ ಮಾಡಿ ದಾಖಲೆ ಪುಸ್ತಕದಲ್ಲಿರುವವರ ಮೊಬೈಲ್ ನಂಬರ್ಗೆ ಕಾಲ್ ಮಾಡಿ ಚೆಕ್ ಮಾಡುವಂತೆ ನಗರಸಭೆ ಅಧ್ಯಕ್ಷರಿಗೆ ಸೂಚಿಸಿದರು.
ಶಾಸಕರ ವಾರ್ರೂಮ್ನ ಪ್ರಮುಖ್ ಸಾಜ ರಾಧಾಕೃಷ್ಣ ಆಳ್ವ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ವಿಶ್ವನಾಥ ಕುಲಾಲ್, ರಾಘವೆಂದ್ರ ಪ್ರಭು ಮತ್ತಿತರರು ಉಪಸ್ಥಿತರಿದ್ದರು.