ಹನಿಟ್ರಾಪ್ ಕೇಸಿನಲ್ಲಿ ಮಹಿಳಾ ಕಾನ್ಸ್ ಟೇಬಲ್ ಅರೆಸ್ಟ್ | ಸಂತ್ರಸ್ತ ಹುಡುಗನಿಂದ ಬಯಲಾಯ್ತು ಆಕೆಯ ಕರಾಳ ಚರಿತ್ರೆ

ನಂಬಿಸಿ ಮದುವೆಯಾದ ಯುವಕ ವಂಚನೆ ಮಾಡಿದ್ದಾನೆಂದು ದೂರು ದಾಖಲಿಸಿರುವ ಹೈದರಬಾದ್‌ನ ಮಹಿಳಾ ಕಾನ್ಸ್‌ಟೇಬಲ್ ಪ್ರಕರಣ ಈಗ ವಿಚಿತ್ರ ತಿರುವು ಪಡೆದುಕೊಂಡಿದೆ.

ಇದೀಗ, ದೂರುದಾರ ಮಹಿಳೆ ಅಂದರೆ ಕಾನ್ ಸ್ಟೇಬಲ್ ಇಡೀ ಪ್ರಕರಣದಲ್ಲಿ ನಾಟಕದ ಪ್ರಮುಖ ಪಾತ್ರಧಾರಿ ಎಂದು ಗೋಚರಿಸಿದೆ. ಪ್ರೀತಿ ನಾಟಕ ಆಡಿ ನಂತರ ಅದರ ಹೆಸರಲ್ಲಿ ಹನಿಟ್ರ್ಯಾಪ್ ಮಾಡಿ ಹಣ ಪೀಕಿರುವ ಆರೋಪ ಮಹಿಳಾ ಕಾನ್ಸ್‌ಟೇಬಲ್ ವಿರುದ್ಧವೇ ಕೇಳಿಬಂದಿದೆ.

ಆಕೆ ಹೈದರಾಬಾದಿನ ಮುಖ್ಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಆ ಮಹಿಳಾ ಕಾನ್ಸ್‌ಟೇಬಲ್ ತನ್ನ ಪೊಲೀಸ್ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ಸಂತ್ರಸ್ತರನ್ನು ಹೆದರಿಸುತ್ತಿದ್ದರು ಎಂದು ಹೇಳಲಾಗಿದೆ.

ಆರೋಪಿ ಕಾನ್ಸ್‌ಟೇಬಲ್‌ನನ್ನು ಸಂಧ್ಯಾರಾಣಿ (28) ಎಂದು ಗುರುತಿಸಲಾಗಿದೆ. ಈ ಹಿಂದೆಯೇ ಈಕೆಗೆ ಮೂರು ಮದುವೆಯಾಗಿದ್ದು, ವಿಚ್ಛೇದನ ಪಡೆದುಕೊಂಡಿದ್ದಾಳೆ. ಓರ್ವ ಪತಿ ಈಕೆಯ ಕಿರುಕುಳವನ್ನು ತಾಳಲಾರದೇ ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದ.

ಹೀಗಿರುವ ಸಂಧ್ಯಾರಾಣಿ ಮತ್ತಷ್ಟು ಮಿಕಗಳಿಗಾಗಿ ಹುಡುಕುತ್ತಿದ್ದಳು. ಹಾಗೆ ಹುಡುಕುವಾಗ ಸುಲಭವಾಗಿ ಸಿಕ್ಕಿಕೊಂಡವನು ಆಸೆಯ ಕಣ್ಣುಗಳ ಹುಡುಗ ಚರಣ್ ರಾಜ್. ಆತ ಹೈದರಾಬಾದ್‌ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆಕೆಯ ರೂಪ, ಕಣ್ಣ ನೋಟ ಮತ್ತು ಆಕೆ ಕಾನ್ಸ್ ಟೇಬಲ್ ಎಂಬ ಜಾಬ್ ಟೈಟಲ್ ಆತನನ್ನು ಆಕೆಯೆಡೆಗೆ ಅಟ್ರಾಕ್ಟ್ ಮಾಡಿತ್ತು. ಒಂದಷ್ಟು ದಿನ ಅವರಿಬ್ಬರೂ ಹೈದರಾಬಾದಿನ ಒರಾಯಾನ್ ಮುಂತಾದ ಮಾಲುಗಳಲ್ಲಿ ಕೈ ಕೈ ಹಿಡಿದುಕೊಂಡು ಸುತ್ತಿದ್ದರು. ಆಕೆ ಆತನ ಜತೆ ಮತ್ತಷ್ಟು ಖಾಸಗಿಯಾಗಿ ಕಳೆದಿದ್ದಳು. ಅದರ ಸುಂದರ ಕ್ಷಣಗಳನ್ನು ಆತನ ಮೂಲಕವೇ ಸೆರೆ ಹಿಡಿಸಿದ್ದಳು. ಆತ ಕೂಡ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದ. ಮುಂದೆ ಅದೇ ಆತನಿಗೆ ಉರುಳಾಗಿತ್ತು.

ಹಾಗೆ ಚರಣ್‌ ರಾಜ್ ಎಂಬಾತನನ್ನು ಸಂಧ್ಯಾರಾಣಿ ತನ್ನ ಬಲೆಗೆ ಕೆಡವಿದ್ದಳು. ಟೈಮ್ ಪಾಸ್ ಗೆಂದು ಕಮಿಟ್ಮೇಂಟ್ ಇಲ್ಲದೆ ಹಾಗೆ ಆತ ಮೂವ್ ಆಗಿದ್ದರೆ, ಸಂಧ್ಯಾ ಮಾತ್ರ ಆತನನ್ನು ಬ್ಲ್ಯಾಕ್ ಮೇಲ್ ಮಾಡಲು ಶುರುಮಾಡಿದ್ದಾಳೆ. ಬಳಿಕ ಆತನನ್ನು ಬಲವಂತವಾಗಿ ಒಪ್ಪಿಸಿ ಮದುವೆ ಸಹ ಆಗಿದ್ದಳು. ಮದುವೆ ಆಗದಿದ್ದರೆ, ಎಸ್‌ಸಿ-ಎಸ್‌ಟಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸುವುದಾಗಿಯೂ ಬೆದರಿಕೆ ಹಾಕಿದ್ದಳು. ಪೊಲೀಸ್ ಕೇಸು ಜೈಲು ಮಾನ ಮರ್ಯಾದಿ ಅಂತ ಭಯಾಪಟ್ಟ ಚರಣ್ ಆತಂಕಗೊಂಡಿದ್ದ. ಆದರೂ ಮದುವೆ ಆದ ಮೇಲೆ ಸಂಸಾರ ಜೋರಾಗಿಯೇ ಸಾಗಿತ್ತು. ಎಲ್ಲವೂ ಬಹುಶಃ ಒಂದು ಹಂತದಲ್ಲಿ ಯಾರಿಗೂ ಗೊತ್ತಾಗದಂತೆ ಸೆಟಲ್ ಆಗಬಹುದಿತ್ತೇನೋ. ನಾಲ್ಕನೆಯ ಮದುವೆ ಮಾಡಿಕೊಂಡು ಆಕೆ ನೆಮ್ಮದಿಯಾಗಿ ಇರಬಹುದಿತ್ತು. ಆದರೆ ಆಕೆ ಮತ್ತೆ ತನ್ನ ಚಾಳಿ ಶುರು ಮಾಡಿಕೊಂಡಿದ್ದಳು ! ಮತ್ತೆ ಮದುವೆಯಾಗದ ಹುಡುಗರ ಹನಿ ಟ್ರಾಪ್ ಗೆ ಆಕೆ ಸಿಂಗರಿಸಿಕೊಂಡು ಹೊರಟಿದ್ದಾಳೆ. ಅದೊಂದು ದಿನ ಅದರ ವಾಸನೆ ಗಂಡನಿಗೆ ಸಿಕ್ಕಿದೆ. ಆ ನಂತರ ಆತ ಆಕೆಯ ಇನ್ನಷ್ಟು ವಿಷಯ ಪತ್ತೆ ಮಾಡಿದ್ದಾನೆ.

ಇದಾದ ಬಳಿಕ ಚರಣ್ ಶಾಮ್ಯಾಬಾದ್ ಡಿಸಿಪಿ ಮತ್ತು ಶಬಾದ್ ಪೊಲೀಸ್ ಠಾಣೆಗೆ ಇಮೇಲ್ ಮೂಲಕ ದೂರು ನೀಡಿದ್ದನು. ಈ ಹಿಂದೆಯೇ ಮದುವೆ ಆಗಿದ್ದ ವಿಚಾರವನ್ನು ಮುಚ್ಚಿಟ್ಟು ಬೆದರಿಸಿ ತನ್ನನ್ನು ಮದುವೆ ಆಗಿದ್ದಾಳೆಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಅಲ್ಲದೆ, ಮದುವೆಯಾಗದ ಯುವಕರನ್ನು ಟಾರ್ಗೆಟ್ ಮಾಡಿ ಪ್ರೀತಿಯ ಹೆಸರಲ್ಲಿ ಹನಿಟ್ರ್ಯಾಪ್ ಮಾಡಿದ ಬಳಿಕ ಬೆದರಿಸಿ ಹಣ ಕಸಿಯುತ್ತಿದ್ದಳು ಎಂದು ದೂರಿದ್ದಾನೆ.

Leave A Reply

Your email address will not be published.