ಸ್ಕೂಟರ್, ಆಟೋ ರಿಕ್ಷಾ ಹಾಗೂ ಕಾರಿನ ನಡುವೆ ಸರಣಿ ಅಪಘಾತ ‍l ಯುವಕ ಬಲಿ

ಕಾಸರಗೋಡು : ಸ್ಕೂಟರ್, ಆಟೋ ರಿಕ್ಷಾ ಹಾಗೂ ಕಾರಿನ ನಡುವೆ ಉಂಟಾದ ಸರಣಿ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ವಿದ್ಯಾನಗರದಲ್ಲಿ ನಡೆದಿದೆ.

 

ಮಹಮ್ಮದ್ ಶಕೀರ್

ಕಾಸರಗೋಡು ಕೊರಕ್ಕೋಡ್ ಬಿಲಾಲ್ ನಗರದ ಮುಹಮ್ಮದ್ ಶಕೀರ್ (21) ಮೃತ ಯುವಕ.

ರವಿವಾರ ರಾತ್ರಿ ಇವರು ಸಂಚರಿಸುತ್ತಿದ್ದ ಸ್ಕೂಟರ್ ಗೆ ಆಟೋ ರಿಕ್ಷಾ ಬಡಿದಿದ್ದು, ನಿಯಂತ್ರಣ ತಪ್ಪಿದ ಸ್ಕೂಟರ್ ಗೆ ಕಾರು ಢಿಕ್ಕಿ ಹೊಡೆಯಿತು ಎನ್ನಲಾಗಿದ್ದು, ಇದರಿಂದ ಗಂಭೀರ ಗಾಯಗೊಂಡ ಶಕೀರ್ ರನ್ನು ಕಾಸರಗೋಡಿನ ಆಸ್ಪತ್ರೆಗೆ ತಲಲುಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಅಪಘಾತಕ್ಕೆ ಕಾರಣವಾದ ಆಟೋ ರಿಕ್ಷಾವನ್ನು ವಶಕ್ಕೆ ತೆಗೆದುಕೊಂಡಿದ್ದು, ಕಾರು ನಿಲ್ಲಿಸದೆ ಪರಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಲ್ಫ್ ಉದ್ಯೋಗಿಯಾಗಿದ್ದ ಶಕೀರ್ ಕೆಲ ಸಮಯದ ಹಿಂದೆ ಊರಿಗೆ ಬಂದು ಕಾಸರಗೋಡು ನಗರದಲ್ಲಿ ಮೊಬೈಲ್ ಸರ್ವಿಸ್ ಮಳಿಗೆಯನ್ನು ಆರಂಭಿಸಿದ್ದರು. ವಿದ್ಯಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.