ಮೇ. 25 ರಿಂದ ಜಿಲ್ಲೆಯಲ್ಲಿ ಮದುವೆ ನಿಷೇಧ, ನಿಶ್ಚಿತಾರ್ಥಕ್ಕೂ ಅವಕಾಶವಿಲ್ಲ | ಉಡುಪಿ ಜಿಲ್ಲಾಧಿಕಾರಿ ಆದೇಶ

ಮದುವೆ ಮೆಹಂದಿ ಮುಂತಾದ ಸಮಾರಂಭದಿಂದಾಗಿ ಕೊರೋನ ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಮೇ 25 ರಿಂದ ಜೂ.7ರ ವರೆಗೆ ಮದುವೆಗೆ ಅನುಮತಿ ನೀಡುವುದಿಲ್ಲ. ಈವರೆಗೆ ಅನುಮತಿ ನೀಡಿದ ಮದುವೆಗಳು ಮಾತ್ರ ನಡೆಯಲಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

 

ಉಡುಪಿ ಕಚೇರಿಯಲ್ಲಿ ಮಾತನಾಡಿದ ಅವರು, ಇಂದು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಡೆಸಿದ ವೀಡಿಯೊ ಕಾನ್ಫರೆನ್ಸ್ ನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಈಗಾಗಲೇ ಮದುವೆ ಆಗಲು ನಿರ್ಧಾರ ಮಾಡಿದವರು ಅದನ್ನು ಮುಂದೂಡಬೇಕು. ಸಾರ್ವಜನಿಕರು ಸಹಕಾರ ನೀಡಬೇಕು. ಈ ಸಂಬಂಧ ತಹಶೀಲ್ದಾರರುಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಕೆಲವರು ಮದುವೆಗೆ ನೀಡಿದ ಅನುಮತಿಯಲ್ಲಿ ನಿಶ್ಚಿತಾರ್ಥ ಕೂಡ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಅದಕ್ಕೆ ಅವಕಾಶ ಇರುವುದಿಲ್ಲ. ಅದೇ ರೀತಿ ಮೆಹಂದಿ, ಬೀಗರ ಊಟ ಕಾರ್ಯಕ್ರಮಗಳನ್ನು ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.ಕ್ರಿಮಿನಲ್ ಮೊಕದ್ದಮೆ ಕಾರ್ಯಕ್ರಮ ಆಯೋಜಕರ ವಿರುದ್ಧ ಮಾತ್ರವಲ್ಲ ಅದರಲ್ಲಿ ಭಾಗವಹಿಸಿದವರ ವಿರುದ್ಧವೂ ಹಾಕಲಾಗುವುದು ಎಂದು ಅವರು ಎಚ್ಚರಿವಿನಾಕಾರಣ ಓಡಾಡುವವರ ವಾಹನಗಳನ್ನು ಮುಟ್ಟು ಗೋಲು ಹಾಕಲಾಗುವುದು. ಅಗತ್ಯ ವಸ್ತುಗಳ ನೆಪದಲ್ಲಿ ಯಾರು ಕೂಡ ಹೊರಗಡೆ ಬರಬಾರದು. ಅಂತವರ ವಿರುದ್ಧ ಕಠಿಣ ಕ್ರಮ ಖಚಿತ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮೊನ್ನೆ ಬೀಸಿದ ತೌಕ್ತೆ ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿ ಇಲೆಕ್ಟ್ರಿಕಲ್ ವಸ್ತುಗಳಿಗೆ ಹಾನಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮೇ 26 ರಂದು ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಇಲೆಕ್ಟ್ರಿಕಲ್ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
ಗಾಳಿಮಳೆಯಿಂದ ವಿದ್ಯುತ್ ಪರಿಕರಗಳು ಹಾನಿಯಾಗಿದ್ದ ಜನರು ಅಂದು ತಮಗೆ ಬೇಕಾದ ಉಪಕರಣಗಳನ್ನು ಅಂಗಡಿಗಳಿಂದ ಖರೀದಿಸಬಹುದಾಗಿದೆ. ಆದರೆ ಇಲೆಕ್ಟ್ರಾನಿಕ್ಸ್ ಅಂಗಡಿ ತೆರೆಯಲು ಅವಕಾಶ ಇಲ್ಲ ಎಂದರು.

Leave A Reply

Your email address will not be published.