“ನಾವೂ ಬದುಕಬೇಕು” ರಾಜ್ಯಾದ್ಯಂತ ಜನಾಂದೋಲನ; ಎಸ್‌ಡಿಪಿಐ ವತಿಯಿಂದ ಸವಣೂರಿನಲ್ಲಿ ಪ್ರತಿಭಟನೆ

ಸವಣೂರು :- ‘ನಾವೂ ಬದುಕಬೇಕು’ ಎಂಬ ಘೋಷಣೆಯ ಭಾಗವಾಗಿ ಸಮಾನ ಮನಸ್ಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಒಕ್ಕೂಟ ಇಂದು ರಾಜ್ಯಾದ್ಯಂತ ಕರೆ ನೀಡಿದ ಜನಾಂದೋಲನದ ಭಾಗವಾಗಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸವಣೂರು ವಲಯ ವತಿಯಿಂದ ಸವಣೂರಿನಲ್ಲಿ ಪ್ರತಿಭಟನೆ ನಡೆಯಿತು.

ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ರಫೀಕ್ ಎಂ ಎ ರವರು ಮಾತನಾಡಿ ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಿಸಿ ಜನರ ಕಣ್ಣಿಗೆ ಮಣ್ಣೆರಚುವಂತಹ ನಾಟಕವಾಡುತ್ತಿದ್ದು, ಇಲ್ಲಿನ ಬಡ, ಮದ್ಯಮ ವರ್ಗದ ಜನರಿಗೆ ಅನುಕೂಲವಾದ ಯಾವುದೇ ಘೋಷಣೆ ಇಲ್ಲವೆಂದು ಕಿಡಿ ಕಾರಿದರು. ರಾಜ್ಯ ಸರ್ಕಾರವು ಎಲ್ಲರಿಗೂ ಉಚಿತ ಚಿಕಿತ್ಸೆ ,ಸರ್ವರಿಗೂ ವ್ಯಾಕ್ಸಿನ್ ವ್ಯವಸ್ಥೆ, ಮಡಿದವರ ಕುಟುಂಬಕ್ಕೆ ಪರಿಹಾರ, ಬಡವರಿಗೆ ಸಮಗ್ರ ಪಡಿತರ ಮತ್ತು ಆರ್ಥಿಕ ಆಸರೆ ಒದಗಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ರಝಾಕ್ ಕೆನರಾ, SDPI ಸವಣೂರು ವಲಯ ಅಧ್ಯಕ್ಷರಾದ ಸಿದ್ದೀಕ್ ಅಲೆಕ್ಕಾಡಿ, ಪಿ‌ಎಫ್ಐ ಸವಣೂರು ಡಿವಿಝನ್ ಅಧ್ಯಕ್ಷರಾದ ರಫೀಕ್ ಎಂ ಎಸ್, ಎಸ್‌ಡಿಪಿಐ ಸವಣೂರು ವಲಯ ಮಾಜಿ ಅಧ್ಯಕ್ಷರಾದ ನಝೀರ್ ಸಿ ಎ, ಸಮಾಜಿಕ ಕಾರ್ಯಕರ್ತರಾದ ನರಸಿಂಹ ಉಪಾಧ್ಯಾಯ ಸಹಿತ ಹಲವರು ಉಪಸ್ಥಿತರಿದ್ದರು.

ಸರ್ಕಾರದ ಮುಂದೆ ಜನತೆಯ ಆಗ್ರಹ:-

  • ಕೋರೋನ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಬೇಕು ಹಾಗೂ ಸರ್ವರಿಗೂ ತ್ವರಿತಗತಿಯಲ್ಲಿ ವ್ಯಾಕ್ಸಿನ್ ವ್ಯವಸ್ಥೆ ಮಾಡಬೇಕು.
  • ಗ್ರಾಮ ಪಂಚಾಯತ್ ಮಟ್ಟದಲ್ಲೂ ಕೋವಿಡ್ ಕೇರ್ ಸೆಂಟರ್ ಗಳನ್ನು ಸ್ಥಾಪಿಸಬೇಕು.
  • ದುಡಿವ ವ್ಯಕ್ತಿಯೂ ಕಳೆದುಕೊಂಡ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಬೇಕು.
  • ಎಲ್ಲಾ ಬಡವರಿಗೂ ತಿಂಗಳ ಸಮಗ್ರ ದಿನಸಿ ಹಾಗೂ 5000 ರೂಗಳ ನೆರವು ಧನ ನೀಡಬೇಕು‌.
  • ಮೈಕ್ರೋ ಫೆನಾನ್ಸ್ ಒಳಗೊಂಡಂತೆ ಎಲ್ಲಾ ಸಾಲಗಳ ಕೋರೋನಾವಧಿಯ ಕಂತುಗಳನ್ನು ಸರ್ಕಾರ ಮನ್ನಾ ಮಾಡಬೇಕು.
  • ಕೆಲಸವಿಲ್ಲದಾಗಿರುವ ಶಿಕ್ಷಕರು, ಉಪನ್ಯಾಸಕರು, ವಕೀಲರು, ಪತ್ರಕರ್ತರು ಮುಂತಾದ ವೃತ್ತಿಪರರಿಗೂ ನೆರವು ನೀಡಬೇಕು.
  • ಬೀಜ ,ಗೊಬ್ಬರ ಹಾಗೂ ಕೃಷಿ ಉಪಕರಣಗಳ ಬೆಲೆ ತಗ್ಗಿಸಬೇಕು, ಸಬ್ಸಿಡಿ ಹೆಚ್ಚಿಸಬೇಕು.

Leave A Reply

Your email address will not be published.