ಮಂಗಳೂರಿನಲ್ಲಿ ಕರಾವಳಿಯ ಕಲ್ಪನೆಯ ಮತ್ಸ್ಯಕನ್ಯೆ ಪ್ರತ್ಯಕ್ಷ

ಕರಾವಳಿ ಜನರ ಕಥೆಗಳಲ್ಲಿ ಕಲ್ಪನೆಗಳಲ್ಲಿ ಒಂದು ಭಾಗವಾಗಿರುವ ಮತ್ಸ್ಯ ಕನ್ಯೆ ಮಂಗಳೂರಿನಲ್ಲಿ ಪ್ರತ್ಯಕ್ಷವಾಗಿದ್ದಾಳೆ. ಇದು ಮಂಗಳೂರಿಗರಿಗೆ ಅಚ್ಚರಿ ಮೂಡಿಸಿದ್ದು, ಜಾಲತಾಣದ ತುಂಬ ಈಕೆಯದೆ ಸುದ್ದಿ.

ಅಂದಹಾಗೆ ಇದು ಸಮುದ್ರದ ಆಳದಿಂದ ಎದ್ದು ಬಂದ ಮತ್ಸ್ಯ ಕನ್ಯೆಯಲ್ಲ. ಈ ಮತ್ಸ್ಯ ಕನ್ಯೆಯ ಪಾರ್ಟ್ ಮಾಡಿದವರು ಪ್ರಿಯಾ ಪವನ್ ಬಾಳಿಗ ಎಂಬ ಗೃಹಿಣಿ. ಈಕೆ ನಿಜವಾದ ಮತ್ಸ್ಯ ಕನ್ಯೆ ಅಂದುಕೊಂಡಿರಾ, ಅಲ್ಲ, ಇದು ಮೇಕ್ ಓವರ್ ಮರ್ಮೈಡ್ ಪ್ರಿಯಾ ಪವನ್ ಬಾಳಿಗ ಅವರ ಮೇಕಪ್ ಕೈಚಳಕ. ಹೌದು, ಲಾಕ್‍ಡೌನ್ ಸಮಯದಲ್ಲಿ ಟೈಮ್ ಪಾಸ್‍ಗೆಂದು ಏನೇನೋ ಪ್ರಯೋಗ ಮಾಡುತ್ತಾರೆ. ಇನ್ನೂ ಹಲವರು ಕಾಲಹರಣ ಸಹ ಮಾಡುತ್ತಾರೆ. ಆದರೆ ಪ್ರಿಯಾ ಅವರು ಲಾಕ್‍ಡೌನ್ ಸಮಯವನ್ನು ಸೆಲ್ಪ್ ಮೇಕಪ್‍ನ ಥೀಮ್ ಫ್ಯಾಂಟಸಿ ಮೇಕಪ್ ಪ್ರಯೋಗದಲ್ಲಿ ಕಳೆದಿದ್ದಾರೆ.

ಮೇಕಪ್ ಆರ್ಟಿಸ್ಟ್ ಆಗಿರುವ ಪ್ರಿಯಾ ಲಾಕ್‌ಡೌನ್ ಸಮಯರ ಟೈಮ್ ಪಾಸ್‌ಗೆಂದು ತಮ್ಮನ್ನು ತಾವೇ ಮತ್ಸ್ಯ ಕನ್ಯೆಯ ರೂಪರ ಪ್ರಕಟಗೊಳಿಸಿದ್ದಾರೆ. ಚಿತ್ರಗಳಲ್ಲಿ ಕಂಡುಬರುವ ಮತ್ಸ್ಯ ಕನ್ಯೆಯ ಚಾನೆಲ್ ರೀತಿಯ ನೀಲಿಯ ಮೊಗ, ಸಮುದ್ರದ ಚಿಪ್ಪುಗಳಿಂದ ತಯಾರಿಸಿರುವ ಕಿರೀಟ, ಹಸಿರು, ನೀಲಿ, ನೇರಳೆ, ಗುಲಾಬಿ ಬಣ್ಣಗಳ ಸಂಯೋಜನೆ ಇರುವ ಮೇಕಪ್ ಹಾಗೂ ಮೀನನ್ನೇ ಹೋಲುವ ಮೇಕ್ ಓವರ್ ಮಾಡಿಕೊಂಡಿದ್ದಾರೆ ಪ್ರಿಯಾ.

ಸೆಲ್ಸ್ ಮೇಕಪ್‌ನ ಥೀಮ್ ಫ್ಯಾಂಟಸಿ ಮೇಕಪ್ ಪ್ರಯೋಗದಲ್ಲಿ ತಾವು ಕಳೆದಿದ್ದು, ಈ ಮೇಕ್ ಓವರ್ ಅಪಾರ ಮೆಚ್ಚುಗೆ ಗಳಿಸಿರುವುದಾಗಿ ಹೆಮ್ಮೆಯಿಂದ ಹೇಳುತ್ತಾರೆ ಪ್ರಿಯಾ. ಈ ರೀತಿ ಮೇಕ್ ಓವರ್ ಮಾಡುವುದು ಭಾರತೀಯರ ತ್ವಚೆಗೆ ಸವಾಲಿನ ಕೆಲಸವೇ ಎಂಬುದು ತಜ್ಞ ಮೇಕಪ್ ವೃತ್ತಿಪರರ ಅನಿಸಿಕೆ.

ಈ ರೀತಿಯ ಮೇಕ್ ಓವರ್ ಗೆ ಒಪ್ಪುವಂತಹ ಬಟ್ಟೆ, ಕಿರೀಟ, ಆಭರಣಗಳಿಗಾಗಿ ಆ ದಂಪತಿ ಹಗಲಿರುಳು ದುಡಿದಿದ್ದು, ಈ ಮೇಕ್ ಓವರ್ ಗೆ ಬಳಸಿದ ಕಿರೀಟವನ್ನು ಪತಿ ಹಾಗೂ ನಾನು ಸೇರಿ ಮಾಡಿದ್ದೇವೆ. ಈ ಕಿರೀಟವನ್ನು ತಯಾರಿಸಲು ದಿನಗಳು ಹಲವು ಹುಡುಕಾಟದಲ್ಲಿ ಕಳೆದು ಹೋಗಿದೆ. ಮೇಕ್ ಓವರ್ ಗೆ ಬೇಕಾದ ಅಗತ್ಯ ವಸ್ತುಗಳ, ಕಿರೀಟಕ್ಕೆ ಬಳಸಿದ ಮುತ್ತು, ವೈವಿಧ್ಯ ರೀತಿಯ ಸಮುದ್ರ ಚಿಪ್ಪುಗಳನ್ನು ಸ್ವತಃ ನನ್ನ ಪತಿ ಪವನ್ ಬಾಳಿಗ ಅವರು ಸಸಿಹಿತ್ಲು ಮುಂಡಾ, ಕಾಪು, ಮುಲ್ಕಿ, ಪಡುಬಿದ್ರಿ ಸಮುದ್ರ ಕಿನಾರೆಗಳಿಂದ ಸಂಗ್ರಹಿಸಿ 2 ಚೀಲದಷ್ಟು ತಂದಿದ್ದರು. ಈ ಕಿರೀಟದ ತೂಕವೇ 528 ಗ್ರಾಂ.ಗಳು ಅಂದರೆ ಅರ್ಧ ಕೆಜಿಗಿಂತ ಅಧಿಕ ಇದೆ ಎಂದು ಪ್ರಿಯಾ ಹೇಳುತ್ತಾರೆ. ಕೊನೆಗೆ ತಾವು ದಿನಗಟ್ಟಲೆ ಪ್ಲಾನ್ ಮಾಡಿ ಶ್ರಮ ವಹಿಸಿದ್ದು ಸಾರ್ಥಕವಾಯಿತು. ಕಡೆಗಳಿಂದ ವ್ಯಾಪಕವಾದ ಪ್ರಶಂಸೆ ಕೇಳಿಬಂದಿದೆ ಎಂದು ಪ್ರಿಯಾ ಪವನ್ ಬಳಿಕ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Leave A Reply

Your email address will not be published.