ಭೂಮಿಯ ಮೇಲೆ ಕೋರೋನಾ ಇದೆ, ಮುಖ್ಯವಾಗಿ ಡಿಸಿ ತಹಸಿಲ್ದಾರ್ ಇತ್ಯಾದಿ ಇದ್ದಾರೆ ಎಂದು ಆಕಾಶದಲ್ಲೇ ಮದುವೆಯಾದ ದಂಪತಿ !
ಚೆನ್ನೈ: ಭೂಮಿ ಮೇಲೆ ಕೊರೋನಾ ಇದೆ. ಅದಕ್ಕಿಂತ ಹೆಚ್ಚಾಗಿ ಡಿಸಿ, ತಹಶೀಲ್ದಾರ, ಎಸೈ, ನೋಡಲ್ ಅಧಿಕಾರಿ, ಕಡೆಗೆ ಅಶಾಕಾರ್ಯಕರ್ತೆಯರ ವರೆಗೆ ಎಲ್ಲರೂ ಬಂದು ಅಕ್ಷತೆ ಕಾಳು ಹಾಕುವ ಬದಲು ಕಲ್ಲು ಹಾಕುವವರೇ. ಈ ಭೂಮಿಯ ಸಾವಾಸವೇ ಬೇಡ ಎಂದು ಆಕಾಶದಲ್ಲಿ ಮದುವೆಯಾಗಲು ಆ ಜೋಡಿ ನಿರ್ಧರಿಸಿದೆ. ಆ ಮೂಲಕವಾಗಿ ನವದಂಪತಿ ಸುದ್ದಿಯಾಗಿದ್ದಾರೆ.
ಮಧುರೈ ನಿವಾಸಿಗಳಾದ ರಾಕೇಶ್, ಧೀಕ್ಷಣಾ ಜೋಡಿ ತಮ್ಮ ಮದುವೆಗಾಗಿ ವಿಶೇಷ ವಿಮಾನವೊಂದನ್ನು ಬುಕ್ ಮಾಡಿ 2 ಗಂಟೆಗಳ ಕಾಲ ಬಾಡಿಗೆ ತೆಗೆದುಕೊಂಡು ಆಕಾಶದಲ್ಲಿ ಮದುವೆಯಾಗಿದ್ದು, ವಿಮಾನದಲ್ಲೇ ತಮ್ಮ ದೊಡ್ಡ ಬಳಗ ಕಟ್ಟಿಕೊಂಡು ಬರೋಬ್ಬರಿ 161 ಬಂಧುಗಳ ಸಮ್ಮುಖದಲ್ಲಿ ಇವರಿಬ್ಬರು ಮದುವೆಯಾಗಿದ್ದಾರೆ. ಈ ಮೂಲಕ ತಮಿಳುನಾಡಿನ ಮಧುರೈನ ಈ ಮದುಮಕ್ಕಳು ತಮ್ಮ ಎಲ್ಲಾ ಪ್ರೀತಿಪಾತ್ರರ ಪ್ರೀತಿಗೆನೋ ಪಾತ್ರರಾಗಿದ್ದಾರೆ.
ಕೋವಿಡ್ ನಿರ್ಬಂಧಗಳಿಂದಾಗಿ ವಿಮಾನದಲ್ಲೇ ಮದುವೆಯಾಗಲು ನಿರ್ಧರಿಸಿದ ವಧು ವರರು ಎರಡು ಗಂಟೆ ಕಾಲ ವಿಮಾನವನ್ನು ಬಾಡಿಗೆಗೆ ಪಡೆದು, ವಿಮಾನದಲ್ಲಿ 161 ಸಂಬಂಧಿಕರ ಉಪಸ್ಥಿತಿಯಲ್ಲಿ ಮಾಂಗಲ್ಯ ಕಟ್ಟುವ ವೇಳೆ ಮಧುರೈ ಮೀನಾಕ್ಷಿ ಅಮ್ಮನ ದೇವಾಲಯದ ಮೇಲೆ ತಮ್ಮ ವಿಮಾನ ಹಾರಾಡುವಂತೆ ಮಾಡಿ, ಅದೇ ವೇಳೆ ಮದುವೆಯಾದರು ಎಂದು ವರದಿಯಾಗಿತ್ತು.
ವಿಮಾನ ಮಧುರೈ ನಿಂದ ತೂತುಕುಡಿಗೆ ಸಂಚರಿಸುವ ಸಂದರ್ಭದಲ್ಲಿ ನಡೆದಿದೆ. ವಿವಾಹದ ಫೋಟೋ, ವೀಡಿಯೋಗಳು ಭಾರೀ ವೈರಲ್ ಆಗುತ್ತಿವೆ.
ಹೆಚ್ಚು ಜನರನ್ನು ಸೇರಿಸುವ ಮೂಲಕವಾಗಿ ಕೊರೊನಾ ನಿಯಮವನ್ನು ಉಲ್ಲಂಘಿಸಿದ್ದಾರೆ. ಭೂಮಿ ಮೇಲೆ ಕೊರೊನಾ ಇದೆ, ಕೊರೊನಾ ನಿಯಮಗಳು ಇವೆ. ಅದಕ್ಕೇ ಭೂಮಿಯ ಸಹವಾಸವೇ ಬೇಡ ಎಂದು ಆಕಾಶದಲ್ಲಿ ಮದುವೆಯಾಗಿದ್ದಾರೆ. ಮದುವೆಗೆ 161 ಮಂದಿ ಆಗಮಿಸಿದ್ದು, ಕೊರೊನಾ ನಿಯಮದ ಪ್ರಕಾರ ಅಷ್ಟು ಮಂದಿ ಸೇರುವ ಹಾಗಿಲ್ಲ. ಆದ್ರೆ ಮದುವೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಸಂಬಂಧಿಕರಿಗೂ RTPCR ಟೆಸ್ಟ್ ಮಾಡಿಸಲಾಗಿತ್ತು ಎಂದು ತಿಳಿದುಬಂದಿದೆ.
ತಮಿಳುನಾಡು ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ನೀಡಿದ ಹೊಸ ಗೈಡ್ಲೈನ್ಸ್ ಪ್ರಕಾರ ಎಲ್ಲಾ ಖಾಸಗಿ ಸಂಸ್ಥೆ ನೌಕರರಿಗೆ ಮನೆಯಲ್ಲಿಯೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಖಾಸಗಿ ಸಂಸ್ಥೆ ವಿಮಾನವೊಂದು ಮದುವೆಗೆ ವೇದಿಕೆ ಕಲ್ಪಸಿರೋದು ಕೊರೊನಾ ನಿಯಮದ ಪ್ರಕಾರ ತಪ್ಪಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ.