100 ವರ್ಷಗಳ ಹಿಂದೆ ನಿರ್ಮಿಸಿಲಾಗಿದ್ದ ಮಸೀದಿ ಧ್ವಂಸ

100 ವರ್ಷಗಳ ಹಿಂದೆ ಅಕ್ರಮವಾಗಿ ನಿರ್ಮಿಸಿಲಾಗಿದ್ದ ಮಸೀದಿಯನ್ನು ಉತ್ತರ ಪ್ರದೇಶ ಸರ್ಕಾರ ನೆಲ ಸಮ ಮಾಡಿದೆ.

ಈ‌ ಘಟನೆ ನಡೆದದ್ದು ಉತ್ತರ ಪ್ರದೇಶದ ಬರಾಬಂಕಿ ಜಿಲ್ಲೆಯ ರಾಮಸ್ನೇಹಿಘಾಟ್ ತಹಸಿಲ್ ನಲ್ಲಿ. ಶತಮಾನಗಳ ಹಿಂದೆ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು. ಆದರೆ ಅದನ್ನು ಈಗ ಸಂಪೂರ್ಣ ನೆಲಸಮ ಮಾಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಸ್ಲಿಂ ಧಾರ್ಮಿಕ ನಾಯಕ, ” ಮಸೀದಿಗೆ ಉತ್ತರ ಪ್ರದೇಶ ಸುನ್ನಿ ಕೇಂದ್ರ ವಕ್ ಮಂಡಳಿಯಿಂದ ಮಾನ್ಯತೆ ಸಿಕ್ಕಿತ್ತು. ಯಾವುದೇ ರೀತಿಯ ವಿವಾದಗಳಿರಲಿಲ್ಲ. ಪೊಲೀಸ್ ಪಡೆಯ ಸಮ್ಮುಖದಲ್ಲಿ ಮಸೀದಿ ತೆರವುಗೊಳಿಸಲಾಗಿದೆ” ಎಂದು ಹೇಳಿದ್ದಾರೆ.

ಮಸೀದಿ ತೆರವಾದ ಬೆನ್ನಲ್ಲೇ ಜನರಿಂದ ಭಾರಿ ವಿರೋಧಗಳು ವ್ಯಕ್ತವಾಗುತ್ತಿವೆ. ಮಸೀದಿ ಮರು ನಿರ್ಮಾಣದ ಕೂಗು ಸಹ ಕೇಳಿ ಬರುತ್ತಿದೆ.

Leave A Reply

Your email address will not be published.