ಆಂಬುಲೆನ್ಸ್’ಗಳ ಹಣ ವಸೂಲಿಗೆ ರಾಜ್ಯ ಸರ್ಕಾರದಿಂದ ಬ್ರೇಕ್ | ಪ್ರತಿ ಕಿಲೋಮಿಟರ್’ಗೆ ದರ ನಿಗದಿ

ಬೆಂಗಳೂರು : ಕೊರೊನಾ ಸೋಂಕು ಪ್ರಾರಂಭವಾದಾಗಿನಿಂದಲೂ ಆಂಬುಲೆನ್ಸ್ ನವರು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇದನ್ನು ತಡೆಯಲು ಇದೀಗ ರಾಜ್ಯ ಸರ್ಕಾರ ಹೊಸ ನಿಯಮಾವಳಿ ರೂಪಿಸಿದೆ.

ಆ ಪ್ರಕಾರ ಪ್ರತಿ ಕಿಲೋಮಿಟರ್ ಗೆ ದರ ನಿಗದಿ ಪಡಿಸಿ, ರಾಜ್ಯ ಸರ್ಕಾರ ಆದೇಶಿಸಿದೆ. ಈ ದರ ನಿಗದಿಯಂತೆ ಹಣ ಪಡೆಯಬೇಕೆಂದು ಖಡಕ್ ಸೂಚನೆಯನ್ನು ಸಹ ನೀಡಿದೆ. ಒಂದು ವೇಳೆ ಈ ರೂಲ್ಸ್ ಬ್ರೇಕ್ ಮಾಡಿದಲ್ಲಿ ಲೈಸೆನ್ಸ್ ಕೂಡ ರದ್ದು ಮಾಡುವುದಾಗಿಯೂ ಎಚ್ಚರಿಕೆ ನೀಡಿದೆ.

ಈ ಕುರಿತಂತೆ ಸಾರಿಗೆ ಸಚಿವರು, ಆರೋಗ್ಯ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಆಂಬುಲೆನ್ಸ್ ಗಳ ಮನಸೋ ಇಚ್ಛೆ ಹಣ ವಸೂಲಿಗೆ ಬ್ರೇಕ್ ಹಾಕುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇನ್ಮುಂದೆ ಆಯಂಬುಲೆನ್ಸ್ ಗಳ 10 ಕಿಲೋಮಿಟ್ ವರೆಗೆ 1,500 ರೂಪಾಯಿ ದರ ನಿಗದಿ ಮಾಡಿದೆ. 10 ಕಿಲೋಮೀಟರ್ ನಂತರಕ್ಕೆ 120 ದರ ನಿಗದಿ ಮಾಡಿದೆ. ಅಲ್ಲದೇ ವೈಟಿಂಗ್ ಚಾರ್ಜ್ ಆಗಿ ಪ್ರತಿ ಗಂಟೆಗೆ ರೂ.200 ನಿಗದಿ ಮಾಡಿದೆ.

ಇನ್ನು ಲೈಫ್ ಸಪೋರ್ಟ್ ಹೊಂದಿರುವಂತ ಆಂಬುಲೆನ್ಸ್ ಗಳಿಗೆ 10 ಕಿಲೋಮೀಟರ್ ಗೆ 2000 ರೂಪಾಯಿ ದರ ನಿಗದಿ ಮಾಡಿದೆ. 10 ಕಿಲೋಮೀಟರ್ ನಂತರದ ಪ್ರಯಾಣಕ್ಕೆ 120 ರೂಪಾಯಿಯ ದರವನ್ನು ನಿಗದಿ ಮಾಡಿದೆ. ಅಲ್ಲದೇ ಪ್ರತಿ ಗಂಟೆಗೆ ಕಾಯುವಿಕೆಯ ಚಾರ್ಜ್ ಆಗಿ ರೂ.250 ದರ ನಿಗದಿ ಪಡಿಸಿ, ಆದೇಶಿಸಿದೆ. ಈ ಆದೇಶವನ್ನು ಉಲ್ಲಂಘಿಸಿ, ಹೆಚ್ಚು ಹಣ ವಸೂಲಿ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ಎಚ್ಚರಿಕೆ ನೀಡಿದೆ.

Leave A Reply

Your email address will not be published.