KGF ನಟ ಕೊರೋನಾಗೆ ಬಲಿ | ಶಾಕ್ ನಲ್ಲಿ ಸ್ಯಾಂಡಲ್ವುಡ್
ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲ ಚಿತ್ರರಂಗದಲ್ಲೂ ಕೊರೋನಾ ಆರ್ಭಟ ಮುಂದುವರೆಯುತ್ತಲೇ ಇದೆ. ಹಲವು ನಟ-ನಿರ್ದೇಶಕರು ಕೊರೋನಾಗೆ ಬಲಿಯಾದ ಬೆನ್ನಲ್ಲೇ, ವಿಶ್ವದಾದ್ಯಂತ ಸದ್ದು ಮಾಡಿದ್ದ ಕೆಜಿಎಫ್ ಸಿನಿಮಾದ ವಿಲನ್ ಕೂಡ ಕೊರೋನಾಗೆ ಬಲಿಯಾಗಿದ್ದಾರೆ.
ಕೆಜಿಎಫ್ ಚಾಪ್ಟರ್ 1 ರಲ್ಲಿ ಮಿಂಚಿದ್ದ ವಿಲನ್ ನಟ ಮಾರನ್ ಕೆಜಿಎಫ್ ಸೋಂಕಿಗೆ ತುತ್ತಾಗಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. 48 ವರ್ಷದ ಮಾರನ್ ಅವರನ್ನು ಕೊರೋನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೂಲತಃ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಮಾರನ್, ಗಿಲ್ಲಿ ಹಾಗೂ ಕುರುವಿ ಚಿತ್ರದಲ್ಲಿ ನಟಿಸಿ ಹೆಸರು ಗಳಿಸಿದ್ದರು. ಕೆಜಿಎಫ್ ಚಾಪ್ಟರ್ 1 ರಲ್ಲಿ ಮಾರನ್ ವಿಲನ್ ಪಾತ್ರದಲ್ಲಿ ಅಬ್ಬರಿಸಿದ್ದರು.
ಮಾರನ್ ಕೇವಲ ವಿಲನ್ ಮಾತ್ರವಲ್ಲ ಹಾಸ್ಯಪಾತ್ರಗಳಲ್ಲೂ ನಟಿಸುತ್ತಿದ್ದರು. ಅದರಲ್ಲೂ ತಮ್ಮ ಛಾಪು ಮೂಡಿಸಿದ್ದರು.
ಗಿಲ್ಲಿ ಮಾರನ್ ಎಂದೇ ಹೆಸರುವಾಸಿಯಾಗಿದ್ದ ಮಾರನ್, ಬಾಸ್,ಎಂಗಿರಾ ಭಾಸ್ಕರನ್,ತಲೈನಗರಂ,ಡಿಶ್ಯುಂವೆಟ್ಟೆ ಚಿತ್ರದಲ್ಲೂ ನಟಿಸಿದ್ದರು. ಇವರ ಈ ಸಾವು ಇಡೀ ಸ್ಯಾಂಡಲ್ ವುಡ್ ಗೆ ಒಂದು ಬಿಗ್ ಶಾಕ್ ನೀಡಿದೆ.