ಹಿಂ.ಜಾ.ವೇ.ಮಾತೃ ಸುರಕ್ಷಾ ಮಂಗಳೂರು ವಿಭಾಗ ಸಂಯೋಜಕ ಗಣರಾಜ ಭಟ್ ರನ್ನು ಹನಿಟ್ರ್ಯಾಪ್ ಮಾಡಲು ವಿಫಲ ಪ್ರಯತ್ನ | ಪುತ್ತೂರು ಠಾಣೆಯಲ್ಲಿ ದೂರು ದಾಖಲು
ಪುತ್ತೂರು : ಹಿಂದೂ ಜಾಗರಣ ವೇದಿಕೆಯ ಮಾತೃ ಸುರಕ್ಷಾ ಮಂಗಳೂರು ವಿಭಾಗ ಸಂಯೋಜಕ ಬಿ.ಗಣರಾಜ ಭಟ್ ಕೆದಿಲ ರನ್ನು ಹನಿಟ್ರ್ಯಾಪ್ ಗೆ ತಂಡವೊಂದರಿಂದ ಯತ್ನ ನಡೆದಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ.ಗಣರಾಜ ಭಟ್ ಕೆದಿಲ ಅವರ ಫೇಸ್ಬುಕ್ ನಲ್ಲಿ peetha Sharma ಅನ್ನುವ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದ್ದು ,ಆ ಹೆಸರಿನ ವ್ಯಕ್ತಿಯ ಪರಿಚಯ ಇವರಿಗೆ ಇಲ್ಲದ ಕಾರಣ ಅಕ್ಸೆಪ್ಟ್ ಮಾಡದೇ ಮೆಸೆಂಜರ್ ನಲ್ಲಿ ತಂಗಿ ನೀವು ಯಾರೆಂದು ತಿಳಿದಿಲ್ಲ, ಎಂದು ಮೆಸೆಜ್ ಕಳಿಸಿದ್ದು,ಇದಕ್ಕೆ ನಾನು ನ್ಯೂ ಡೆಲ್ಲಿಯವಳು ವಿಡಿಯೊ ಕರೆಯಲ್ಲಿ ಎಂಜೋಯ್ ಮಾಡೋಣ ಎಂದು ಉತ್ತರಿಸಿದ್ದಾಳೆ.
ಆಗ ಇದು ಹನಿ ಟ್ರೇಪ್ ಆಗಿರಬಹುದೆಂದು ಭಟ್ ರಿಗೆ ಸಂಶಯ ಬಂದು ಸಂಘಟನೆಯ ಕಾರ್ಯಕರ್ತರಿಗೆ ವಿಚಾರ ತಿಳಿಸಿದ್ದಲ್ಲದೆ, ಆ ಸಂದೇಶವನ್ನು ಸ್ಕ್ರೀನ್ ಶಾಟ್ ತೆಗೆದು ತನ್ನ ಫೇಸ್ ಬುಕ್ ಎಕೌಂಟಿನಲ್ಲಿ ಈ ರೀತಿ ಮೋಸ ನಡೆಯುತ್ತಿದೆ ಜಾಗರೂಕರಾಗಿರಿ ಎಂದು ಪೋಸ್ಟ್ ಮಾಡಿದ್ದಾರೆ.
ನಂತರ ಗಣರಾಜ ಭಟ್ ಅವರ ದೂರವಾಣಿ ಸಂಖ್ಯೆಯನ್ನು ಆಕೆ ಕೇಳಿದ್ದಾಳೆ. ಇವರು ಕೊಡದೆ ಇದ್ದಾಗ ಮೆಸೆಂಜರ್ ನಲ್ಲಿ ವಿಡಿಯೋ ಕರೆ ಮಾಡಿದ್ದಾಳೆ.ಇವರು ಕರೆಯನ್ನು ಸ್ವೀಕರಿಸಿ ತನ್ನ ಮುಖವನ್ನು ತೋರಿಸಲಿಲ್ಲ.ತಕ್ಷಣ ಕರೆಯನ್ನು ಸ್ಥಗಿತ ಗೊಳಿಸಿ ನಿಮ್ಮ ಮುಖ, ಪೂರ್ತಿ ಶರೀರ ಹಾಗು ಗುಪ್ತಾಂಗ ತೋರಿಸಿ ಎಂದು ಸಂದೇಶ ಬಂದಿರುತ್ತದೆ.
ತಕ್ಷಣ ಈ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು
ಗಣರಾಜ ಭಟ್ ಅವರು ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.