ತೌಕ್ತೆ ಚಂಡ ಮಾರುತ | ಇಂದು ರೆಡ್ ಅಲರ್ಟ್ ,3 ಜಿಲ್ಲೆಗಳಲ್ಲಿ ವ್ಯಾಪಕ‌ ಮಳೆ

 

ತೌಕ್ತೆ ಚಂಡ ಮಾರುತಕ್ಕೆ ಕರಾವಳಿ ಅಕ್ಷರಶಃ ನಲುಗಿಹೋಗಿದೆ.ಮೇ.16ರಂದು ಹೆಚ್ಚು ಅಬ್ಬರ ಇರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.

ಐಎಂಡಿ ಮಾಹಿತಿಯಂತೆ ತೌಖ್ತೆ ವೇಗ ಮೇ 16ರಂದು 115-125ರಿಂದ 140 ಕಿ.ಮೀ. ಇರಲಿದೆ. ಸಂಜೆ 6ಕ್ಕೆ 125-135ರಿಂದ 150 ಕಿ.ಮೀ. ಮತ್ತು ಮೇ 17ರಂದು ಬೆಳಗ್ಗೆ 6ಕ್ಕೆ 145-155ರಿಂದ 170 ಕಿ.ಮೀ., ಸಂಜೆ 6ಕ್ಕೆ 150-160ರಿಂದ 175 ಕಿ.ಮೀ. ಮತ್ತು ಮೇ 18ರ ಬೆಳಗ್ಗೆ 6ಕ್ಕೆ 150-160ರಿಂದ 175 ಕಿ.ಮೀ. ವೇಗ ಪಡೆಯುವ ಸಾಧ್ಯತೆ ಇದೆ.

ಕರಾವಳಿಯಲ್ಲಿ ಇನ್ನೂ 3 ದಿನಗಳ ಕಾಲ ಉತ್ತಮ ಮಳೆ ಸುರಿಯಲಿದ್ದು, ಭಾರತೀಯ ಹವಾಮಾನ ಇಲಾಖೆಯು ಮೇ 16ರಂದು ರೆಡ್‌ ಅಲರ್ಟ್‌ ಘೋಷಿಸಿದೆ. ಮೇ 17ರಂದು ಆರೆಂಜ್‌ ಮತ್ತು ಮೇ 18ರಂದು ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಈ ವೇಳೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರಲಿದೆ. ತಾಸಿಗೆ 30 ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾ ಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

Leave A Reply

Your email address will not be published.