ಮನೆಯಲ್ಲಿ ದನವಿಲ್ಲದಿದ್ದರೂ ಬೈಕ್‌ನಲ್ಲಿ ಹಾಲಿನ ಕ್ಯಾನ್ | ಪೊಲೀಸರನ್ನು ಯಾಮಾರಿಸೋ ಯುವಕನ ಬಣ್ಣ ಬಯಲು : ಪೊಲೀಸರನ್ನು ಯಾಮಾರಿಸಬಹುದು, ಆದರೆ ಕೊರೊನಾವನ್ನಲ್ಲ !

ಕೋರೋನ ರೋಗದ ನಿಮಿತ್ತ ಸರಕಾರ ಒಂದಲ್ಲ ಒಂದು ಕಟ್ಟುಪಾಡುಗಳನ್ನು ಜಾರಿಗೆ ತರುತ್ತಿದೆ. ಹಾಗಾದರೂ ಸೋಂಕು ಹರಡದೆ ಇರಲಿ, ಎಂಬ ಸದುದ್ದೇಶ. ಹೊರಗಡೆ ಬಂದು ರಸ್ತೆಗಿಳಿದರೆ ಪೊಲೀಸರು ಮತ್ತು ಇತರ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾರೆ. ಮನೆಯಲ್ಲಿ ಕೂರಲು ಆಗದೆ ಇರುವವರು, ಹೇಗಾದರು ಮಾಡಿ ಪೊಲೀಸರ ಮತ್ತು ಅಧಿಕಾರಿಗಳ ಕಣ್ಣಿಂದ ತಪ್ಪಿಸಿಕೊಳ್ಳಬೇಕೆಂದು ಹಲವರು ವಿನೂತನ ಐಡಿಯಾಗಳಿಗೆ ಮೊರೆಹೋಗುತ್ತಿದ್ದಾರೆ.

ಅಲ್ಲಿ ಕಡಬ ತಾಲೂಕಿನ ಪೇರಡ್ಕ ಎಂಬಲ್ಲಿ ಯುವಕನೊಬ್ಬ ಸಕತ್ ಪ್ಲಾನ್ ಹೆಣೆದಿದ್ದು, ಆತ ರಸ್ತೆಗೆ ಇಳಿಯುವಾಗ ಸದಾ ತನ್ನೊಂದಿಗೆ ಹಾಲಿನ ಕ್ಯಾನ್ ಒಂದನ್ನು ಹಿಡಿದುಕೊಂಡು ಬೈಕ್ ನಲ್ಲಿ ತಿರುಗಾಟ ನಡೆಸಿದ್ದಾನೆ. ಪೇರಡ್ಕದ ಈ ಯುವಕನ ಮನೆಯಲ್ಲಿ ಒಂದು ಗ್ಲಾಸ್ ಪೇರ್ ಕೂಡ ಸಿಗೋದಿಲ್ಲ. ಅಸಲಿಗೆ ಆತನ ಮನೆಯಲ್ಲಿ ದನ ಬಿಡಿ, ಒಂದು ಬೋರಿ ಕೂಡ ಇಲ್ಲವಂತೆ !


Ad Widget

Ad Widget

Ad Widget

Ad Widget

Ad Widget

Ad Widget

ಮೊನ್ನೆ ಒಬ್ಬಾತ ಸದಾ ತನ್ನೊಂದಿಗೆ ಕತ್ತಿ ಮುಟ್ಟಾಳೆ ಮತ್ತು ಇತರ ಕೃಷಿ ಸಲಕರಣೆ ಇಟ್ಟುಕೊಂಡು ಸಾಗುತ್ತಿದ್ದ. ಕೃಷಿ ಮತ್ತು ಕಾರ್ಮಿಕರನ್ನು ಯಾರ್ ಕೂಡಾ ತಡೆದು ನಿಲ್ಲಿಸಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.

ಹೀಗೆ ಹಲವು ಪ್ಲಾನ್ ಗಳು ಬಳಕೆಗೆ ಬಂದಿವೆ. ಬ್ಯಾಂಕ್ ಪಾಸ್ ಬುಕ್, ಸೊಸೈಟಿ ಪಾಸ್ ಬುಕ್, ಪಂಚಾಯತ್ ಕಾಗದಪತ್ರಗಳು, ಒಂದಷ್ಟು ಮಾತ್ರೆ ಮತ್ತು ಸಿರಪ್ ತುಂಬಿಕೊಂಡ ಚೀಲ,ಯಾವಾಗಲೋ ಮಾಡಿಟ್ಟಿದ್ದ ನರೇಗಾ ಕಾರ್ಡ್, ಬೈಕ್‌ನಲ್ಲಿ ಸಾರಣೆಯ ಕತ್ತಿ,ಬುರ್ನಾಸ್ ,ರೇಷನ್ ಕಾರ್ಡ್ ಹಾಗೂ ಒಂದು ಸಣ್ಣ ಗೋಣಿ ಹೀಗೆ ಹಲವು ತಂತ್ರಗಳನ್ನು ಅಳವಡಿಸಲು ಶುರುಮಾಡಿದ್ದಾರೆ.

ಅಧಿಕಾರಿಗಳನ್ನು, ಪೊಲೀಸರನ್ನು ಈ ರೀತಿ ಯಾಮಾರಿಸಬಹುದೇನೋ, ಆದರೆ ಇಂತಹ ಮನಸ್ಥಿತಿಯ ವ್ಯಕ್ತಿಗಳಿಗೆ ಕೊರೊನಾವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಎಲ್ಲರ ಸುರಕ್ಷತೆ ಹಾಗೂ ಆರೋಗ್ಯಯುಕ್ತ ಸಮಾಜಕ್ಕೆ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸುವುದು ಅಗತ್ಯ.

error: Content is protected !!
Scroll to Top
%d bloggers like this: